ಬೈಲಹೊಂಗಲ

ಅಧ್ಯಾತ್ಮದಿಂದ ಶಾಂತಿ ನೆಲೆಸಲು ಸಾಧ್ಯ: ಶ್ರೀಗಳು

ಅಧ್ಯಾತ್ಮದಿಂದ ಶಾಂತಿ ನೆಲೆಸಲು ಸಾಧ್ಯ: ಶ್ರೀಗಳು

ಬೈಲಹೊಂಗಲ 12: ನಾವು ಮಾಡಿದ ಸಮಾಜಮುಖಿ ಕೆಲಸಗಳಿಂದ ನಮಗೆ ಒಳ್ಳೆಯ ಹೆಸರು ಲಭಿಸಲಿದೆ ಎಂದು ಪಟ್ಟಣದ ಶ್ರೀಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.

ಅವರು ಶ್ರೀಮಠದಲ್ಲಿ ಮಂಗಳವಾರ ಮಾತೋಶ್ರೀ ತಂಗೆಮ್ಮಾ ತಾಯಿಯವರ 9ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿ, ನಾವೆಲ್ಲರೂ ಆಧ್ಯಾತ್ಮಿಕತೆಗೆ ಹೆಚ್ಚೆಚ್ಚು ಒತ್ತು ನೀಡಿದಾಗ ಮಾತ್ರ ನಾಡಿನಲ್ಲಿ ಶಾಂತಿ ನೆಲೆಸಲು ಸಾಧ್ಯ. ಪುರಾಣ, ಪ್ರವಚನಗಳಲ್ಲಿ ಪಾಲ್ಗೊಂಡು ಪೂಜ್ಯರ ವಾಣಿ ಆಲಿಸಿ ಮನ ಶಾಂತಿಗಳಿಸಿಕೊಂಡು ಆರೋಗ್ಯಯುತ ಜೀವನ ಸಾಗಿಸಲು ತಿಳಿಸಿದರು.

ಪುಣ್ಯಾರಾಧನೆ ನಿಮಿತ್ಯ ಮಾತೋಶ್ರೀ ತಂಗೆಮ್ಮಾ ತಾಯಿಯವರ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಜರುಗಿತು. ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಉಪಾಧ್ಯಕ್ಷೆ ಶಶಿಕಲಾ ಹೊಸಮನಿ ಅವರನ್ನು ಸತ್ಕರಿಸಲಾಯಿತು. 

ಶಿವಾನಂದ ಬೆಳಗಾಂವಿ, ಮಲ್ಲೇಶಿ ಹೊಸಮನಿ, ಪುಂಡಲೀಕ ಕಡಕೋಳ, ಸಿದ್ದು ಬೆಳಗಾಂವಿಮಹಾಂತೇಶ ಅಕ್ಕಿ, ಬಸವರಾಜ ಕಲಾದಗಿ, ಉಳವಪ್ಪ ಉಂಡಿ, ರುದ್ರಪ್ಪ ತುರಮರಿ, ವಿಜಯ ಬೆಳವಡಿ, ಈರಪ್ಪ ಹಲಕಿ, ಎಸ್.ಎಂ. ಬಡಿಗೇರ ಹಾಗೂ ಭಕ್ತರು ಇದ್ದರು.

ಸುದ್ದಿ ಓದಿ