“ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿಗೆ ಪವಿತ್ರಾ ಆಯ್ಕೆ
ಶಿಗ್ಗಾವಿ : ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಪವಿತ್ರಾ ರಮೇಶ ಧರ್ಮಣ್ಣವರ ವಿದ್ಯಾರ್ಥಿನಿಯು ಇತ್ತೀಚೆಗೆ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125 ಕ್ಕೆ 125 ಪರಿಪೂರ್ಣ ಅಂಕಗಳನ್ನು ಪಡೆದ ಪಾಸಾದ ಹಿನ್ನೆಲೆಯಲ್ಲಿ ಡಾವಣಗೇರಿಯ ಕಲಾಕುಂಚ ಸಾಂಸ್ಕೃತಿ ಸಂಸ್ಥೆ ಕೊಡ ಮಾಡುವ “ಕನ್ನಡ ಕೌಸ್ತುಭ” ರಾಜ್ಯ ಪ್ರಶಸ್ತಿಗೆ ಭಾಜನವಾಗಿದ್ದಾಳೆ.
ಪ್ರಶಸ್ತಿಯನ್ನು ಜುಲೈ 30 ರಂದು ಡಾವಣಗೇರಿಯಲ್ಲಿ ನಡೆಯುವ ವೈಭವಪೂರ್ಣ ಸಂಭ್ರಮದ ಸಮಾರಂಭದಲ್ಲಿ ವಿದ್ಯಾರ್ಥಿನಿ ಪವಿತ್ರಾ ರಮೇಶ ಧರ್ಮಣ್ಣವರ ಅವಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಲಾಗಿದೆ.