ಬೈಲಹೊಂಗಲ

ಅಯ್ಯಪ್ಪ ಸ್ವಾಮಿ ಪಾಲಕಿ ಉತ್ಸವಕ್ಕೆ ಪಾಟೀಲ ಚಾಲನೆ

ಅಯ್ಯಪ್ಪ ಸ್ವಾಮಿ ಪಾಲಕಿ ಉತ್ಸವಕ್ಕೆ ಪಾಟೀಲ ಚಾಲನೆ

ಲೋಕದರ್ಶನ ವರದಿ 


ಬೈಲಹೊಂಗಲ 03: ಪಟ್ಟಣದ ವಿದ್ಯಾನಗರದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ಯ  ವರ್ಷ ಪದ್ಧತಿಯಂತೆ ಅಯ್ಯಪ್ಪಸ್ವಾಮಿಗೆ ಗಂಧಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ ಹಾಗೂ ವಿವಿಧ ರೀತಿಯ ಅಲಂಕಾರ ಪೂಜೆಗಳು ಡಾ.ಮಹಾಂತಯ್ಯಶಾಸ್ರ್ತಿ ಆರಾದ್ರಿಮಠ ನೇತೃತ್ವದಲ್ಲಿ ನೆರವೇರಿದವು. 

  ನಂತರ ಮೂಕಾಂಬಿಕಾ ದೇವಸ್ಥಾನದ ಎದುರು ದುರ್ಗಾ ಸಪ್ತಸತಿ ಪಾರಾಯಣ, ಮಹಾಗಣ ಹೋಮ ನೆರವೇರಿತು ಪೂರ್ಣಾಹುತಿ ಕಾರ್ಯಕ್ರಮವನ್ನು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅವರು ನೆರವೇರಿಸಿದರು.  ನಂತರ  ಪಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅಯ್ಯಪ್ಪನ ದರ್ಶನ ಪಡೆದರು. ಇದೇ ವೇಳೆ ದೇವಸ್ಥಾನ ಕಮೀಟಿ ವತಿಯಿಂದ ಡಾ.ವಿಶ್ವನಾಥ ಪಾಟೀಲ ಅವರನ್ನು ಸತ್ಕರಿಸಲಾಯಿತು. 

  ವಿಠ್ಠಲ ಗುರು ಸ್ವಾಮಿ, ರುದ್ರ​‍್ಪ ಮೆಟಗುಡ್ಡ, ವಿಶ್ವನಾಥ ಮೆಟಗುಡ್ಡ, ಅಭಿಷೇಕ ಬೋಳನ್ನವರ, ಶ್ರೀಕಾಂತ ಯರಗಟ್ಟಿ, ಗಂಗಾಧರ ಸಾಲಿಮಠ, ಸಚಿನ ಸ್ವಾಮಿ ಅಯ್ಯಪ್ಪ ಮಾಲಾಧಾರಿಗಳು ಇದ್ದರು. 


ಸುದ್ದಿ ಓದಿ