ಸಿಟಿಇ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಪಾಟೀಲ ಅಧಿಕಾರ ಸ್ವೀಕಾರ
ಲೋಕದರ್ಶನ ವರದಿ
ಚಿಕ್ಕೋಡಿ 04: ಇಲ್ಲಿನ ಪ್ರತಿಷ್ಠಿತ ಸಿಟಿಇ ಸಂಸ್ಥೆಯ ಅಹಲ್ಯಾಬಾಯಿ ಅ ಪಾಟೀಲ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಪ್ರೊ.ಬಿ.ಬಿ.ಪಾಟೀಲ ಅಧಿಕಾರ ವಹಿಸಿಕೊಂಡರು.
ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಬೋಧನೆ ಮಾಡುತ್ತಿದ್ದ ಇವರು ಈಗ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ.ಕುಲಕರ್ಣಿ, ಎಸ್.ವಿ.ಅಡಕೆ, ಎಸ್.ಎಸ್.ಕುಲಕರ್ಣಿ,ವ್ಹಿ.ಸಿ.ಕುಲಕರ್ಣಿ, ಆಡಳಿತಾಧಿಕಾರಿ ಎಸ್.ಜಿ.ಜಾಹಗೀರದಾರ, ಜಂಟಿ ಕಾರ್ಯದರ್ಶಿ ಎಂ.ಎಸ್.ದೇಶಪಾಂಡೆ, ನಿವೃತ್ತ ಪ್ರಾಚಾರ್ಯ ಡಿ.ಎಂ.ಕುಲಕರ್ಣಿ ನೂತನ ಪ್ರಾಚಾರ್ಯ ಪ್ರೊ.ಬಿ.ಬಿ.ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು.