ಮನರಂಜನೆ

ನಟ ದುನಿಯಾ ವಿಜಯ್ ಗೆ ಪಿತೃವಿಯೋಗ

ನಟ ದುನಿಯಾ ವಿಜಯ್ ಗೆ ಪಿತೃವಿಯೋಗ

  ಬೆಂಗಳೂರು, ನ. 18  ನಟ ದುನಿಯಾ ವಿಜಯ್ ಗೆ ಪಿತೃವಿಯೋಗವಾಗಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.  ಅವರಿಗೆ 81 ವರ್ಷ ವಯಸ್ಸಾಗಿತ್ತು.
 
ಮೂರು ತಿಂಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ದುನಿಯಾ ವಿಜಯ್, ಆ ನೋವಿನಿಂದ ಹೊರಬರುವ ಮುನ್ನವೇ ತಂದೆಯನ್ನೂ ಕಳೆದುಕೊಂಡು ದುಃಖತಪ್ತರಾಗಿದ್ದಾರೆ.
 
ತಂದೆಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, “ಮಿಸ್ ಯೂ ಅಪ್ಪ” ಎಂದು ಬರೆದುಕೊಂಡಿದ್ದಾರೆ.
 

ಸುದ್ದಿ ಓದಿ