ಐಪಿಎಲ್ ಪ್ರಾಯೋಜಕತ್ವದ ಬಿಡ್ಡಿಂಗ್ಗೆ ಪತಂಜಲಿ ಚಿಂತನೆ
ನವದೆಹಲಿ, ಆಗಸ್ಟ್ 10: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಶೀಷರ್ಿಕೆ ಪ್ರಾಯೋಕತ್ವಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುವರ್ೆದ ಬಿಡ್ಡಿಂಗ್ ಸಲ್ಲಿಸಲು ಚಿಂತನೆ ನಡೆಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾದ ಮೊಬೈಲ್ ತಯಾರಿಕಾ ಸಂಸ್ಥೆ ವಿವೊ ಅನ್ನು ಪ್ರಾಯೋಜತ್ವದಿಂದ ಕೈಬಿಟ್ಟಿ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ವಿವಿಧ ಕಂಪನಿಗಳು ಪೈಪೋಟಿ ನಡೆಸುತ್ತಿವೆ. ಪತಂಜಲಿ ಬ್ರಾಂಡ್ ಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಈ ವರ್ಷದ ಐಪಿಎಲ್ ಪ್ರಾಯೋಜಕತ್ವ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕಂಪನಿಯ ವಕ್ತಾರ ಎಸ್,ರೆ, ತಿಜಾರಾವಾಲಾ ಹೇಳಿದ್ದಾರೆ.
ಈ ಮಧ್ಯೆ ಜಿಯೊ, ಅಮೆಜಾನ್, ಟಾಟಾ ಗ್ರೂಪ್ ಮತ್ತು ಅದಾನಿ ಗ್ರೂಪ್ ಗಳು ಸಹ ಟೂನರ್ಿಯ ಶೀಷರ್ಿಕೆ ಪ್ರಾಯೋಜಕತ್ವ ಪಡೆಯಲು ಎದುರು ನೋಡುತ್ತಿವೆ ಎಂದು ಎಕನಾಮಿಕ್ಸ್ ಟೈಮ್ಸ್ ಉಲ್ಲೇಖಿಸಿದೆ. ಪೂರ್ವ ಲಡಾಕ್ ನ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ದೇಶವ್ಯಾಪಿ ಕರೆ ತೀವ್ರಗೊಂಡ ಹಿನ್ನೆಲೆಯಲ್ಲಿ ಚೀನಾ ಮೂಲದ ವಿವೊ ಕಂಪನಿಯ ಪ್ರಾಯೋಜಕತ್ವಕ್ಕೆ ಬಿಸಿಸಿಐ ತಡೆ ಒಡ್ಡಿದೆ.