ರಾಷ್ಟ್ರೀಯ

ಶನಿವಾರ ಪಾಟ್ನಾದಲ್ಲಿ ಪಾಸ್ವಾನ್ ಅಂತ್ಯಕ್ರಿಯೆ

ಶನಿವಾರ ಪಾಟ್ನಾದಲ್ಲಿ  ಪಾಸ್ವಾನ್ ಅಂತ್ಯಕ್ರಿಯೆ

ನವದೆಹಲಿ,   ಅಕ್ಟೋಬರ್ 9 :ದೆಹಲಿಯ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತ್ಯಕ್ರಿಯೆ ಶನಿವಾರ  ಪಾಟ್ನಾದಲ್ಲಿ  ಜರುಗಲಿದೆ.ಇಂದು ಅವರ  ಪಾರ್ಥೀವ  ಶರೀರವನ್ನು  ದೆಹಲಿಯ  ನಿವಾಸಕ್ಕೆ ತರಲಾಗಿದ್ದು ನಂತರ  ಪಾಟ್ನಾ ಕ್ಕೆ ತಂದು  ಪಕ್ಷದ ಕಚೇರಿಯಲ್ಲಿ ಕೆಲ  ಕಾಲ ಇಡಲಾಗುವುದು ಹೇಳಲಾಗಿದೆ ಪಾಸ್ವಾನ್ ನಿಧನದ ಗೌರವಾರ್ಥ ದೆಹಲಿಯಲ್ಲಿ  ಸರ್ಕಾರಿ ಕಚೇರಿಗಳ ಮೇಲೆ   ರಾಷ್ಟ್ರದ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದೆ. ಶನಿವಾರ  ಸಕಲ ಸರ್ಕಾರಿ ಗೌರವಗಳೊಂದಿಗೆ  ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನಕ್ಕೆ  ಬಿಜೆಪಿ ಅಧ್ಯಕ್ಷ ಜೆ.ಪಿ . ನಡ್ಡಾ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.  


ಸುದ್ದಿ ಓದಿ