ಪ್ರಯಾಣಿಕ ರೈಲುಗಳು ಭಾಗಶಃ ಪುನರಾರಂಭ
ನವದೆಹಲಿ, ಮೇ 13,ಮೂರನೇ ಹಂತದ ಲಾಕ್ ಡೌನ್ ಕೊನೆಗೊಳ್ಳುತ್ತಿರುವ ಬೆನ್ನಲ್ಲೇ ಭಾರತೀಯ ರೈಲ್ವೆ, ಪ್ರಯಾಣಿಕ ರೈಲು ಸಂಚಾರವನ್ನು ಭಾಗಶಃ ಪುನರಾಂಭಿಸಿದೆ. ಆರಂಭದಲ್ಲಿ ೧೫ ಜೋಡಿ ರೈಲುಗಳ ಸಂಚಾರ ಪ್ರಾರಂಭಗೊಂಡಿದ್ದು, ಈವರೆಗೆ ೮ ರೈಲುಗಳ ಸಂಚಾರ ಪ್ರಾರಂಭವಾಗಿದೆ. ಮೂರು ರೈಲುಗಳು ದೆಹಲಿಯಿಂದ ಹಾಗೂ ಉಳಿದ ೫ ರೈಲುಗಳು ಇತರ ನಗರದಿಂದ ದೆಹಲಿಗೆ ಪ್ರಯಾಣಿಸುತ್ತಿವೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ರಾಜಧಾನಿ ದೆಹಲಿಯಿಂದ 3,460 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇಂದು ಪ್ರಯಾಣ ಆರಂಭಿಸಿರುವ ರೈಲುಗಳು ಹವಾನಿಯಂತ್ರಿತ ದರ್ಜೆ, ಮೊದಲ ದರ್ಜೆ, ದ್ವಿತೀಯ ಮತ್ತು ೩ನೇ ಎಸಿ ದರ್ಜೆಯ ಬೋಗಿಗಳನ್ನು ಹೊಂದಿವೆ. ಭಾರತೀಯ ರೈಲ್ವೆ ನಿರ್ವಹಿಸುತ್ತಿರುವ ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ ಈ ಹೆಚ್ಚುವರಿ ರೈಲುಗಳ ಸೇವೆ ಇರುತ್ತದೆ. ಮುಂಗಡ ಕಾಯ್ದಿರಿಸಿದ ಹಾಗೂ ದೃಢಪಟ್ಟ ಟಿಕೆಟ್ ಹೊಂದಿರುವ ಪ್ರಯಾಣಿಕರು ಮಾತ್ರ ರೈಲು ನಿಲ್ದಾಣ ಪ್ರವೇಶಿಸಲು ಅವಕಾಶವಿದೆ. ಮುಖಗವಸು ಕಡ್ಡಾಯವಾಗಿರುತ್ತದೆ. ಅಲ್ಲದೆ ರೈಲುಗಳ ನಿರ್ಗಮನ ಸಮಯದಲ್ಲಿ ಪ್ರಯಾಣಿಕರ ಉಷ್ಣಾಂಶ ಮಾಪನ ಮಾಡಲಾಗುವುದು. ರೋಗಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 