ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣ
ರಾಣೇಬೆನ್ನೂರು 27: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಲ್ಲೇಶ್ವರಂ-ಬೆಂಗಳೂರು ಇವರು ಜನವರಿ 2022 ರಲ್ಲಿ ನಡೆಸಿದ ವಿಶೇಷವಾಗಿ ಸಂಗೀತ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ, ರಾಣೇಬೆನ್ನೂರಿನ ಉಮಾಶಂಕರ ನಗರದಲ್ಲಿರುವ ವಿಶ್ವರೂಪ ಲಲಿತ ಕಲಾ ನಿಕೇತನದ ವಿದ್ಯಾರ್ಥಿಗಳಾದ ರೋಹಿಣಿ ಎಂ ಮತ್ತು ಪ್ರಿಯಾಂಕಾ ಕೆಂಚರಡ್ಡಿ ಇವರು ಡಿಸ್ಟಿಂಕ್ಷನ್ (ಅತ್ಯುತ್ತಮ) ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಾರ್ಗದರ್ಶಕರಾದ ಗುರೂಜೀ ಮೌನೇಶ್ವರ ಆಚಾರ್ಯ ಇವರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.