ನವ ಸಂಕಲ್ಪ ಚೇತನದಡಿಯಲ್ಲಿ ಪಕ್ಷ ಸಂಘಟನೆ: ಆಜೂರ
ಶಿಗ್ಗಾವಿ 24: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75 ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸುವ ಬಗ್ಗೆ ಶಿಗ್ಗಾವಿ ಮತ್ತು ಸವಣೂರ ಬ್ಲಾಕ ಕಾಂಗ್ರೆಸ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಬೂಲಿಂಗಪ್ಪ ಆಜೂರ ಮಾತನಾಡಿ ನವ ಸಂಕಲ್ಪ ಚೇತನದಡಿಯಲ್ಲಿ ಶಿಗ್ಗಾಂವ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕು ಎಂಬುದರ ಬಗ್ಗೆ ಪಕ್ಷದ ಎಲ್ಲ ಮುಖಂಡರ ಜೊತೆ ಸೇರಿ ಕಾರ್ಯೊನ್ಮುಖರಾಗುತ್ತೇವೆ ಅಲ್ಲದೇ ಹೆಚ್ಚಿನ ಸಂಖೈಯಲ್ಲಿ ಕಾರ್ಯಕರ್ತರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಯಶಸ್ವಗೋಳಿಸುತ್ತೇವೆ ಎಂದರು.
ಸವಣೂರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್.ಜೆ ಮುಲ್ಲಾ ಮಾತನಾಡಿ ಈ ಅಮೃತ ಮಹೋತ್ಸ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಮಟ್ಟದ ಕಾಂಗ್ರೇಸ್ ಮುಖಂಡರುಗಳು ಮತ್ತು ಅಭಿಮಾನಿಗಳು ಸೇರಿದಂತೆ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದರು.
ಕಾಂಗ್ರೇಸ್ ಮುಖಂಡ ಸೋಮಣ್ಣ ಬೇವಿನಮರದ ಮಾತನಾಡಿ ಬಿ.ಜೆ.ಪಿ ಪಕ್ಷದವರು ಐಟಿ ಮತ್ತು ಈಡಿ ಹೆಸರಿನಲ್ಲಿ ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ ಇದರಿಂದ ಬೇಸತ್ತ ಜನಸಾಮಾನ್ಯರು ಮತ್ತು ಯುವಕರು ಬಿಜೆಪಿ ಪಕ್ಷದ ವಿರುದ್ದ ತಿರುಗಿ ಬಿದ್ದಿದ್ದಾರೆ, ಸಾಮಾನ್ಯ ಜನರು ಬೆಲೆ ಏರಿಕೆಯಿಂದ ಬೆಸತ್ತಿದ್ದಾರೆ, ಹಿಂದಿನ ನಮ್ಮ ಕಾಂಗ್ರೇಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡಿ ಹೇಳಿದಂತೆ 165 ಭರವಸೆಗಳನ್ನು ಈಡೆರಿಸಿದವರು ಯಾರಾದರು ಇದ್ದರೇ ಅದು ಮಾಜಿ ಸಿ.ಎಮ್ ಸಿದ್ದರಾಮಯ್ಯವನರು ಮಾತ್ರ ಎಂದರು.
ಕೆ.ಪಿ.ಸಿ.ಸಿ ಸಂಯೋಜಕ ಯಾಸೀರಖಾನ ಪಠಾಣ ಮಾತನಾಡಿ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಒಗ್ಗಟ್ಟಿನಿಂದ ಶ್ರಮಿಸಲಾಗುವದು ಇದು ವಿಶಿಷ್ಟ ಹಾಗೂ ವಿಶೇಷವಾಗಿ ನಡೆಯಲಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ ಸದಸ್ಯ ಷಣ್ಮುಖಪ್ಪ ಶಿವಳ್ಳಿ ಮಾತನಾಡಿ ಜಿಲ್ಲಾ ಹಾಗೂ ಗ್ರಾಮ ಪಂಚಾಯತ, ಪುರಸಭೆ ಮಟ್ಟದಲ್ಲಿ ಸಭೆಮಾಡಿ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಅಮೃತ ಮಹೋತ್ವವ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೆವೆ ಈ ಕಾರ್ಯಕ್ರಮ ಅಭಿಮಾನಿಗಳೆಲ್ಲರೂ ಸೇರಿಕೊಂಡು ಮಾಡುವ ಕಾರ್ಯಕ್ರಮವಾಗಿದೆ ಎಂದರು.
ಸುದ್ದಿಘೋಷ್ಠಿಯಲ್ಲಿ ಸಂಜಿವಕುಮಾರ ನೀರಲಗಿ, ಹನುಮಂತಪ್ಪ ಬಂಡಿವಡ್ಡರ ಗುರುನಗೌಡ ಪಾಟೀಲ, ಮಂಜುನಾಥ ಮಣ್ಣಣ್ಣವರ,ಶಿವಾನಂದ ಬಾಗೂರ, ಬಾಬಾರ ಬೋವಾಜಿ, ಅಶೋಕ ಓಲೇಕಾರ, ಸುಭಾಸ ಮಜ್ಜಿಗಿ, ರವಿ ಕರಿಗಾರ್ ಮಹಮ್ಮದ ಯೂಸುಪ್ ದೊಡ್ಡಮನಿ, ಪೀರಸಾಬ್ ಬಾನಿ, ಮಂಜುನಾಥ ಮೆಣಸಿನಕಾಯಿ, ಮುದಪ್ಪ ಹೊಸಪೇಟಿ, ಗದಿಗೇಪ್ಪ ಬಳ್ಳಾರಿ, ಅನಿಲ ಭದ್ರಾಪುರ, ನಿಸಾರಅಹ್ಮದ್ ತೋಕಲ್ಲಿ, ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.