ಇಂಡಿ

ಯುವಜನಾಂಗ ಕ್ರೀಡೆಗಳಲ್ಲ್ಲಿ ಪಾಲ್ಗೊಂಡು ಆರೋಗ್ಯವಂತ ಸದೃಢ ಶರೀರ ಹೊಂದಿ: ಮುಜಗೊಂಡ

ಯುವಜನಾಂಗ ಕ್ರೀಡೆಗಳಲ್ಲ್ಲಿ ಪಾಲ್ಗೊಂಡು ಆರೋಗ್ಯವಂತ ಸದೃಢ ಶರೀರ ಹೊಂದಿ: ಮುಜಗೊಂಡ


ಇಂಡಿ 30: ಮುಂದುವರೆದ ಯುಗದಲ್ಲಿ ಯುವ ಸಮುದಾಯ ಆಟೋಟಗಳಲ್ಲಿ ಪಾಲ್ಗೊಳ್ಳದೆ ಮೊಬೈಲ್ ನೋಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಯುವಜನಾಂಗ ಕ್ರೀಡೆಗಳಲ್ಲ್ಲಿ ಪಾಲ್ಗೊಂಡು ಆರೋಗ್ಯವಂತ ಸದೃಢ ಶರೀರ ಹೊಂದಬೇಕು ಎಂದು ಅರಣ್ಯ ಸಂರಕ್ಷಣಾಧಿಕಾರಿ ಧನರಾಜ ಮುಜಗೊಂಡ ಹೇಳಿದರು. 

ಮಂಗಳವಾರ ತಾಲೂಕಿನ ಸಂಗೋಗಿ ಗ್ರಾಮದಲ್ಲಿ ಸಂಗೋಗಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಕ್ರಿಕೆಟ್ ಟೋರ್ನಾಮೇಂಟ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. 

ವಿದ್ಯಾರ್ಥಿಗಳ  ಜೀವನದಲ್ಲಿ ಗುರಿ ಇರಬೇಕು. ಭವಿಷ್ಯದಲ್ಲಿ ಕನಸುಗಳನ್ನು ಹೊತ್ತಿಕೊಂಡಿರಬೇಕು. ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು. ದೇಶ ನನಗಾಗಿ ಏನು ಕೊಟ್ಟಿದೆ ಎನನುವುವದಕ್ಕಿಂತ ದೇಶಕ್ಕಾಗಿ ನಾನು ಏನು ಮಾಡಬೇಕು ಎಂಬುದನ್ನು ಮನಗಾಣಬೇಕು. 

ಆಟ ಪಾಠಗಳಿಂದ ವಿಧ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಧೈರ್ಯ, ಸೋಲು, ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸತತ ಪರಿಶ್ರಮಿಗಳಾಗಿ ಉತ್ತಮ ಚಿಂತನೆ ಅಳವಡಿಸಿಕೊಳ್ಳಬೇಕು ಎಂದರು.  

ವಿಠ್ಠಲಗೌಡ ಯಶವಂತ್ರಾಯಗೌಡ ಪಾಟೀಲ ಟೋರ್ನಾಮೇಂಟ್ ಉದ್ಘಾಟಿಸಿದರು. 

ಕರವೇ ತಾಲೂಕಾ ಅಧ್ಯಕ್ಷ ಬಾಳು ಮುಳಜಿ, ಶ್ರೀಶೈಲ ಕೌಲಗಿ, ಸಿದ್ದರಾಯ ಐರೋಡಗಿ, ಭೀಮಣ್ಣಾ ಕೌಲಗಿ, ಮಹೇಶ ಹೂಗಾರ,  ಮಲ್ಲು ಪೂಜಾರಿ, ನಿಂಗಣ್ಣಾ ಪೂಜಾರಿ ಇದ್ದರು. 


ಸುದ್ದಿ ಓದಿ