ಸರಕಾರದ ಯೋಜನೆಯಲ್ಲಿ ಸರ್ವರೂ ಪಾಲ್ಗೊಳ್ಳಿರಿ
ಸರಕಾರದ ಯೋಜನೆಯಲ್ಲಿ ಸರ್ವರೂ ಪಾಲ್ಗೊಳ್ಳಿರಿ
ನೇಸರಗಿ 16: ಸರಕಾರದಿಂದ ನಡೆಯುತ್ತಿರುವ ಗಣತಿ ಕಾರ್ಯಕ್ಕೆ ಸರ್ವರೂ ಭಾಗಿಯಾಗಬೇಕೆಂದು ಶಿಕ್ಷಕ ರಾಜು ಗೆಜ್ಜಿ ಹೇಳಿದರು. ಸಮೀಪದ ಮೊಹರೆ ಗ್ರಾಮದಲ್ಲಿ ಬೈಲಹೊಂಗಲ ಸರ್ವ ವಿದ್ಯಾದೀಪಾ ಸಮಾಜ ಸೇವೆ ಸಂಸ್ಥೆ ಯಿಂದ ಡಿ ಪಾರ್ಮ ಭರ್ತಿ ಮಾಹಿತಿ ಕುರಿತು ಮಾತನಾಡಿ, ಇದು ಸರಕಾರದಿಂದ ಬರುವ ಯೋಜನೆ ಮತ್ತು ಚುನಾವಣೆಯಲ್ಲಿ ಮತ ಹಾಕಲು ಉಪಯೋಗಕಾರಿಯಾಗಿದೆ. ಇದರಿಂದ ಯಾರೂ ವಂಚಿತವಾಗಬಾರದೆಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಫಾ.ಅಲೆಕ್ಸ ಲಿಮೇಲಿ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಫಾ.ಜಿಯೊ ರೋಮನ್, ಫಕೀರ್ಪ ಹಳೇಮನಿ, ಜೇಸಿಪ್ ತಳವಾರ, ಗ್ರಾಮಸ್ಥರು ಪಾಲ್ಗೊಂಡಿದ್ದರು. ಕಲಾವತಿ ಹೋಗರ್ತಿ ಸ್ವಾಗತಿಸಿದರು. ರುದ್ರವ್ವ ಗಡದವರ ನಿರೂಪಿಸಿದರು. ಸಕ್ರೆವ್ವ ಹಳೇಮನಿ ವಂದಿಸಿದರು.