ಸಂಸದರ ವೇತನ ಶೇ.30ರಷ್ಟು ಕಡಿತ; ತಿದ್ದುಪಡಿ ಮಸೂದೆಗೆ ಸಂಸತ್ ಅವಿರೋಧ ಅನುಮೋದನೆ
ನವದೆಹಲಿ, ಸೆಪ್ಟೆಂಬರ್ 15: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಸದರ ವೇತನವನ್ನು ಒಂದು ವರ್ಷದ ಮಟ್ಟಿಗೆ ಶೇ.30ರಷ್ಟು ಕಡಿತಗೊಳಿಸುವ ಸಂಸತ್ ಸದಸ್ಯರ ವೇತನ, ಭತ್ಯ ಮತ್ತು ಪಿಂಚಣಿ (ತಿದ್ದುಪಡಿ) ಮಸೂದೆ, 2020 ಅನ್ನು ಅವಿರೋಧವಾಗಿ ಅನುಮೋದಿಸಲಾಯಿತು.
1954ರ ಕಾಯ್ದೆಗೆ ತಿದ್ದುಪಡಿ ತಂದಿರುವ ಮಸೂದೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಮಂಡಿಸಿದರು.
ದೇಶದಲ್ಲಿ ಕೋವಿಡ್ ಅಲೆ ಆರಂಭಗೊಳ್ಳುತ್ತಿದ್ದಂತೆಯೇ ಈ ತಿದ್ದುಪಡಿ ಮಸೂದೆಯನ್ನು ಪ್ರಸ್ತಾಪಿಸಿತ್ತು. ಇದು ಈ ವರ್ಷದ ಏಪ್ರಿಲ್‌ನಿಂದ ಸಂಸದರ ವೇತನ, ಭತ್ಯೆಯ ಕಡಿತವನ್ನು ಒಳಗೊಂಡಿದೆ.