“ಕುಡಿಯಲು ನೀರು ಇಲ್ಲ” ಎಂದು ಗಮನ ಸೆಳೆದ ಸಂಸತ್
ಧಾರವಾಡ ಗ್ರಾಮೀಣ 05: ಊರಿನಲ್ಲಿ ಕುಡಿಯಲು ನೀರು ಹಾಗೂ ಬೆಳೆಗೆ ನೀರು ನಮಗೆ ಇಲ್ಲ ಎಂದು ವಿರೋಧ ಪಕ್ಷದ ನಾಯಕಿ ಯುವ ಸಂಸತ್ತಿನಲ್ಲಿ ಗಮನ ಸೇಳೆದಳು.
ಇದಕ್ಕೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ಮೊಟರ್ ಕೆಟ್ಟಿದೆ ರಿಪೇರಿ ಮಾಡಿಸಿ ಆ ಊರಿಗೆ ನೀರು ಇಂದೇ ಬಿಡುತ್ತವೆ ಎಂದರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಯುವ ಸಂಸತ್ನಲ್ಲಿ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಗುರಿಯಾಯಿತು. ಶಾಲೆ ಮುಚ್ಚಲು ನೀವೇ ಕಾರಣ. ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಶಿಕ್ಷಣ ಸಚಿವೆ ಹಾಸ್ಯ ಚಟಾಕಿ ಹಾರಿಸಿ ಸದನದಲ್ಲಿ ನಗೆಯ ಬುಗ್ಗೆ ಉಕ್ಕಿಸಿದರು. ಅಕ್ಷರ ದಾಸೋಹ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆ ಮೂಲಕ ಮಕ್ಕಳನ್ನು ಶಾಲೆಗೆ ಸೆಳೆಯಲಾಗುತ್ತಿದೆ ಆತಂಕ ಬೇಡ ಎಂದು ಹೇಳಿದರು. ಸಂಸದೀಯ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ಯುವ ಸಂಸತ್' ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದ್ದು ಗಮನ ಸೆಳೆಯಿತು.ವಿದ್ಯಾರ್ಥಿಗಳು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರಂತೆ ವಾದ ಮಂಡಿಸಿದರು. ಆಡಳಿತ ಸದಸ್ಯರಿಂದ ಉತ್ತರ, ಪ್ರತಿಪಕ್ಷ ದ ಸದಸ್ಯರ ಪ್ರತ್ಯುತ್ತರ ಥೇಟ್ ಜನಪ್ರತಿನಿಧಿಗಳ ಮಾತಿನಂತಿತ್ತು, ವಿದ್ಯಾರ್ಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಂಡು ವಾಕ್ ಚಾತುರ್ಯದ ಮೂಲಕ ಗಮನ ಸೆಳೆದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಸಭಾಪತಿ, ಗೃಹ ಸಚಿವ, ಶಿಕ್ಷಣ ಸಚಿವ, ಆರೋಗ್ಯ ಸಚಿವ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಸರ್ಧೆಯ ಆರಂಭದಲ್ಲಿ ಸದನಕ್ಕೆ ಸಭಾಪತಿಗಳ ಬರುತ್ತಿದ್ದಂತೆಯೇ ಶಾಸಕರು, ಸಚಿವರು, ಮುಖ್ಯ ಮಂತ್ರಿಗಳು, ವಿರೋಧ ಪಕ್ಷದ ನಾಯಕರು ಎದ್ದು ನಿಂತು ಗೌರವ ಸೂಚಿಸಿದರು. ಸಭಾ ಪತಿಗಳ ಆದೇಶದ ಮೇರೆಗೆ ಕಲಾಪ ಆರಂಭವಾಯಿತು. ರೈತರು ಸಾಲ ಪರಿಹಾರ ವಿತರಿಸದ ಆಡಳಿತ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಪ್ರತಿಪಕ್ಷದ ನಾಯಕರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯ, ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರ ನೀಡದ ಮುಖ್ಯಮಂತ್ರಿ, ಸಚಿವರು, ಸದನದಲ್ಲಿ ಗಲಾಟೆಮಾಡಿದರೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ ಸಭಾಪತಿ...
ಹೌದು ಹಿಗೊಂದು ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಧಾರವಾಡ ಗ್ರಾಮೀಣದ ಬಿಆರಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ಅಣಕು ಯುವ ಸಂಸತ್ ಅವೇಶನದಲ್ಲಿ ಈ ಚರ್ಚೆ ನಡೆಯಿತು.
ಭಾರತ ದೊಡ್ಡ ಪ್ರಜಾಪ್ರಭುತ್ವ ಸಂಸದೀಯ ಆಡಳಿತ ವ್ಯವಸ್ಥೆ ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾಯಾಂರ್ಗ ಮತ್ತು ನ್ಯಾಯಾಂಗಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾವಂತರು ರಾಜಕೀಯದಿಂದ ದೂರ ಸರಿಯುತ್ತಿರುವ ಕಾರಣ ದೇಶಕ್ಕೆ ಹಿನ್ನಡೆ ಆಗುತ್ತಿದೆ. ವಿದ್ಯಾವಂತರು, ಪ್ರಾಮಾಣಿಕರು ರಾಜಕೀಯ ಪ್ರವೇಶಿಸಬೇಕಿದೆ ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ತಿಳಿಸಿದರು.
ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಕುಮಾರ್ ಕೆ ಎಫ್ ಮಾತನಾಡತ್ತಾ ಸಂಸದೀಯ ವ್ಯವಸ್ಥೆಯಲ್ಲಿನ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಯುವ ಸಂಸತ್ ಹೆಸರಿನಡಿ ಚರ್ಚಾ ಸ್ಪರ್ಧೆಯನ್ನು ಏರಿ್ಡಸಲಾಗಿದೆ ಎಂದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳ ಪರವಾಗಿ ಜನಪ್ರತಿನಿಧಿಗಳು ಆಡಳಿತ ನಡೆಸಲಿದ್ದಾರೆ. ಪ್ರಜಾಪ್ರಭುತ್ವ ಯಶಸ್ಸಿಗೆ ಜನಪ್ರತಿನಿಧಿಗಳ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕರಾದ ಪ್ರಕಾಶ ಅಂಗಡಿ ಮಾತನಾಡುತ್ತಾ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವ ದೇಶದ ಸಂಸತ್ತಿನ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ ಎಂದರು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಓದ್ಯೋಗಿಕ ಸೇರಿದಂತೆ ದೇಶದ ಸಮಗ್ರ ಅಭಿವೃದ್ದಿಗೆ ವಿಧೇಯಕಗಳನ್ನು ರೂಪಿಸುವ ಪರಮಾಧಿಕಾರಿ ಸಂಸತ್ತಿಗಿದೆ ಎಂದರು.
ಶಿಕ್ಷಣ ಸಂಯೋಜಕರುಗಳಾದ ಶ್ರೀಕಾಂತ್ ಗೌಡ ಪ್ರಸ್ಥಾವಿಕವಾಗಿ ಮಾತನಾಡುತ್ತಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳಲ್ಲಿ ಚುಕ್ಕಿ-ಚುಕ್ಕಿ ರಹಿತ ಪ್ರಶ್ನೆ, ಮಸೂದೆಗಳನ್ನು ಯಾರು ಮಂಡನ ಮಾಡುತ್ತಾರೆ ಹಾಗೂ ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪ್ರತಿನಿಧಿಗಳಾಗಿ ಜವಾಬ್ದಾರಿ ವಹಿಸಿಕೊಂಡು ಹಲವು ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡಿದರು.
ನಂತರ ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಕುಳಿತರು. ಸಭಾಧ್ಯಕ್ಷರು ಕಾರ್ಯಕಲಾಪ ಆರಂಭಿಸಿದರು. ಸಂತಾಪ ಸೂಚನೆ, ಪ್ರಶ್ನೊತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ವಿಧೇಯಕಗಳ ಮಂಡನೆ, ಅಲ್ಪಕಾಲಾವಧಿ ಚರ್ಚೆ... ಹೀಗೆ ನಾನಾ ಚರ್ಚೆಗಳಲ್ಲಿ ಪಾಲ್ಗೊಂಡು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಪಕ್ಷ ಗಳ ಸದಸ್ಯರು ಪ್ರಶ್ನೆಗಳನ್ನು ಕೇಳಿ ಸರಕಾರದಿಂದ ಉತ್ತರ ಪಡೆಯುತ್ತಿದ್ದು ಗಮನ ಸೆಳೆಯಿತು.
ರಾಷ್ಟ್ರೋತ್ಥಾನ ವಿದ್ಯಾಲಯ ಮುಮ್ಮಿಗಟ್ಟಿಯ ಶ್ರೀಶ್ ಭಟ್, ಹೇಮಾವತಿ.ಸಿ ಸರಕಾರಿ ಪ್ರೌಢ ಶಾಲೆ ಕುರಬಗಟ್ಟಿಯ ಐಶ್ವರ್ಯ ಗುಂಡಗೋವಿ ಸರಕಾರಿ ಪ್ರೌಢ ಶಾಲೆ ಪುಡಕಲಕಟ್ಟಿಯ ಚೈತ್ರಾ ತರ್ಲಘಟ್ಟಿ ವೈಷ್ಣವಿ ಅಂಗಡಿ ಮೇಘಾ ತಡಕೋಡ ನೆಹರೂ ಪ್ರೌಢ ಶಾಲೆ ಹೆಬ್ಬಳ್ಳಿಯ ಪ್ರೀಯಾಂಕ ಆಯಟ್ಟಿ ಎಸ್.ಜಿ.ವಿ .ಉಪ್ಪಿನ ಬೆಟಗೇರಿಯ ಅಮ್ರತ ಸವದತ್ತಿ,ಸರಕಾರಿ ಪ್ರೌಢ ಶಾಲೆ ವೀರಾಪೂರದ ಅಮ್ರತಾ ಸಿದ್ದಾಪೂರ,ತನ್ವಿ ಪಾಟೀಲ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆಯ ಪ್ರಶ್ನೆಗಳು, ಗುರುತಿಸುವ ಪ್ರಶ್ನೆಗಳು, ರಹಿತ ಪ್ರಶ್ನೆಗಳು ಇತ್ಯಾದಿಗಳನ್ನು ಚರ್ಚಿಸಿದ್ದು ವಿಶೇಷವಾಗಿತ್ತು.
ಪ್ರತಿನಿಧಿ ಸಂಸ್ಥೆಗಳ ಪಾತ್ರದ ಬಗ್ಗೆ ಅರಿವು ಮೂಡಿಸಿ. ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸುವುದು ಮತ್ತು ಅಭಿಪ್ರಾಯಗಳಿಗೆ ಸಹಿಷ್ಣತೆ ಮತ್ತು ಒಬ್ಬರ ಸ್ವಂತ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು. ಶಾಸಕಾಂಗ ಸಭೆಯ ಕಾರ್ಯವಿಧಾನಗಳ ಬಗ್ಗೆ ವಿದ್ಯಾರ್ಥಿಗಳ ಅರಿವನ್ನು ಹೆಚ್ಚಿಸಿ. ಯೂತ್ ಪಾರ್ಲಿಮೆಂಟ್ ಸ್ಪರ್ಧೆಯ ಗುರಿಯು ವಿದ್ಯಾರ್ಥಿಗಳಲ್ಲಿ ವಾಕ್ಚಾತುರ್ಯ, ಸಮಯಪ್ರಜ್ಞೆ, ಸೂಕ್ಷ್ಮತೆ, ಧೈರ್ಯ ಮತ್ತು ವಿಷಯವನ್ನು ಉತ್ತಮವಾಗಿ ಪ್ರಸ್ತುತಪಡಿಸುವಂತಹ ನಾಯಕತ್ವದ ಗುಣಗಳನ್ನು ಅಭಿವೃದ್ಧಿಪಡಿಸುವುದಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ. ಎಫ್. ಡಯಟ್ ಉಪನ್ಯಾಸಕರಾದ ಪ್ರಕಾಶ ಅಂಗಡಿ, ಶಿಕ್ಷಣ ಸಂಯೋಜಕರಾದ ಬಸವರಾಜ ಛಬ್ಬಿ, ಶ್ರೀಕಾಂತ್ ಗೌಡ, ಬಿಆರ್ಪಿ ಎಸ್ ವಿ ಸಂ