ಸಂವಿದಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರವರ ಪರಿನಿರ್ವಹಣಾ ದಿನಾಚರಣೆ
ಮುದ್ದೇಬಿಹಾಳ 07: ಆರ್ಥಿಕ, ಸಾಮಾಜಿಕ, ತುಳಿತಕ್ಕಕೊಳ ಗಾಗಿರುವ, ದಲಿತರ ಸಮಾನತೆಗಾಗಿ ನಿರಂತರ ಶ್ರಮಿಸುವುದರ ಮೂಲಕ, ಭಾರತದ ಮನೆ ಮನಗಳಲ್ಲಿ ಅಮಾನತೆಯ ಬೆಳಕು ಹಚ್ಚಿದ ಮಹಾನ ನಾಯಕ ಡಾ: ಬಿ ಆರ್ ಅಂಬೇಡ್ಕರ್ ಅವರಾಗಿದ್ದಾರೆ ಎಂದು ತಹಶಿಲ್ದಾರ ಬಲರಾಮ ಕಟ್ಟಿಮನಿ ಹೇಳಿದರು.
ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ತಾಲೂಕಾ ಆಡಳಿತದ ವತಿಯಿಂದ 67 ನೇ ಸಂವಿದಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರವರ ಪರಿನಿರ್ವಹಣಾ ದಿನಾಚರಣೆಯ ನಿಮಿತ್ಯ ಬುಧವಾರ ಅಂಬೇಡ್ಕರವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಭಾರತ ದೇಶದ ಸಂವಿಧಾನದ ಹೀರಿಮೆ ಮತ್ತು ಗರಿಮೆಯನ್ನು ವಿಶ್ವದ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡು, ಅಪ್ಪಿಕೊಂಡಿವೆ. ಇಂತಹ ಪ್ರಬುದ್ಧವಾದ ಸಂವಿಧಾನ ಬೇರೆ ಯಾವ ದೇಶಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದ ಅವರು, ಕೇವಲ ದಿನಾಚರಣೆ ಆಚರಿಸಿದ ಮಾತ್ರಕ್ಕೆ ಅವರನ್ನು ಗೌರವ ಸೂಚಿಸಿದ ಅವರು ನೀಡಿರುವ ಪ್ರಭುದ್ಧವಾದ ಸಂದೇಶವನ್ನು ಇಂದಿನ ಯುವ ಪೀಳಿಗೆಯ ಯುವಕರು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು. ಸಾಗಿದಾಗ ಮಾತ್ರ ಸಮಾನತೆಯಿಂದ ಬದುಕಿ ಬಾಳಲು ಸಾಧ್ಯ ಎಂದರು
ಈ ವೇಳೆ ದಲಿತ ಮುಖಂಡ ಹರೀಷ ನಾಟಿಕಾರ, ವಾಯ್ ಎಚ್ ವಿಜಯಕರ, ಡಿ ಬಿ ಮೂದೂರ ಅವರು ಮಾತನಾಡಿ ದೇಶದಲ್ಲಿ ತಾಂಡವಾಡುತ್ತಿದ್ದ ಅಸೃಶ್ಯತೆ ಮತ್ತು ಜಾತೀಯತೆ ವಿರುದ್ಧ ಸಿಡಿದೆದ್ದು ಸಾಕಷ್ಟು ಹೋರಾಟ ನಡೆಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ದಲಿತ ಸಮುದಾಯಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ಮಾಹಾನ್ ವ್ಯಕ್ತಿಯಾಗಿದ್ದರು.
ಅಂಬೇಡ್ಕರ್ರವರು ಕೇವಲ ಒಂದು ಜಾತಿಗೆ ಸೀಮಿತ ಅಲ್ಲ. ಮನುಕುಲಕ್ಕೆ ಅವರ ಕೊಡುಗೆ ಅಪಾರವಾದದ್ದು. ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿ ಸಂವಿಧಾನದ ಹಕ್ಕುಗಳ ಬಗ್ಗೆ ಜನರಿಗೆ ತಿಳಿಸಿದರು. ಅಂಬೇಡ್ಕರ್ ರವರ ವಿಚಾರ ಧಾರೆಗಳನ್ನು ಅರ್ಥ ಮಾಡಿಕೊಂಡರೆ ಯವ ಪೀಳಿಗಳಿಗೆ ಭವಿಷ್ಯ ಉಜ್ವಲವಾಗುತ್ತದೆ. ಸೂರ್ಯ ಚಂದ್ರರು ಇರುವ ತನಕ ಅಂಬೇಡ್ಕರ್ ಅವರ ಆದರ್ಶ ಗುಣಗಳು ಅವರ ಅಭಿವೃದ್ಧಿ ಕಾರ್ಯಕ್ರಮಗಳು ಪ್ರಸ್ತುತವಾಗಿರುತ್ತವೆ ಎಂದರು. ಪ್ರಜಾ ಪ್ರಭುತ್ವ ವ್ಯವಸ್ಥೆ ಉಳಿದಿದೆ ಎಂದರೆ ಅದು ಸಂವಿಧಾನ ದಿಂದ ಮಾತ್ರ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಲಮಾಣಿ, ಪಿಎಸೈ ಸಂಜೀವಕುಮಾರ ತಿಪ್ಪರಡ್ಡಿ, ಬಸವರಾಜ ಪೂಜಾರಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಿರೇಗೌಡರ, ಬಿಸಿಎಂ ಇಲಾಖೆ ಶಿವಲೀಲಾ ಕೋಣ್ಣೂರ, ಪಿಎಸ್ ಕಸನಕ್ಕಿ. ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿ, ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಹೊಲ್ದೂರ ಹಲವರು ಇದ್ದರು.