ಪಾಲಕರು ಮಕ್ಕಳಿಗೆ ನೀತಿ ಪಾಠ ಹೇಳಿ ಕೊಡಬೇಕು: ಹೆಗಡೆ
ಲೋಕದರ್ಶನ ವರದಿ
ಮುಂಡಗೋಡ:ಮಕ್ಕಳಿಗೆ ವೇಷ-ಭೂಷಣಗಳನ್ನು ತೊಡಿಸುವುದರ ಜೊತೆಗೆ ಪಾಲಕರು ನೀತಿ ಪಾಠಗಳನ್ನು ಹೇಳಿ ಕೊಡಬೇಕು ಎಂದು ಪ್ರಾಂಶುಪಾಲ ಜಿ.ಎನ್.ಹೆಗಡೆ ಹೇಳಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ತಾಲೂಕಿನ ಮಳಗಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳಿಗೆ ಏರಿ್ಡಸಲಾಗಿದ್ದ ಕೃಷ್ಣ-ರಾಧೆಯರ ವೇಷ ಭೂಷಣ ಮತ್ತು ನಟನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಸ್ಡಿಎಮ್ಸಿ ಉಪಾಧ್ಯಕ್ಷ ವಿನಾಯಕ ಶೆಟ್ಟಿ ಮುಂದಿನ ದಿನಗಳಲ್ಲಿ ಎಲ್ಲ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆಯುವಂತೆ ಪ್ರೇರೇಪಿಸಿದರು. ಎಲ್ಕೆಜಿ ವಿಭಾಗದಿಂದ ಭೂಮಿಕಾ ಉದಯ ಕೊಳಗಿ ಪ್ರಥಮ, ಧೃತಿ ಗಾಣಿಗ ದ್ವಿತೀಯ, ಭಾರ್ಗವ ಶಿಂಧೆ ತೃತೀಯ ಮತ್ತು ಯುಕೆಜಿ ವಿಭಾಗದಿಂದ ಚಿನ್ಮಯ ಇಡಗೋಡ ಪ್ರಥಮ, ಸುಹಾಸ ನರೇಗಲ್ಲ ದ್ವಿತೀಯ ಹಾಗೂ ಪ್ರಿಯಾ ವಾಲ್ಮೀಕಿ ತೃತೀಯ ಬಹುಮಾನ ಪಡೆದರು. ನಿರ್ಣಾಯಕರಾಗಿ ಶಿಕ್ಷಕಿಯರಾದ ಮೂಕಾಂಬೆ ಹೆಗಡೆ, ಪುಷ್ಪಲತಾ ನಾಯಕ ಮತ್ತು ಬಬಿತಾ ಡಿ.ಎಸ್. ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಸ್.ಡಿಎಮ್.ಸಿ. ಸದಸ್ಯರು ಉಪಸ್ಥಿತರಿದ್ದರು. ಚೈತ್ರಾ ಪಾಟೀಲ ಮತ್ತು ಪವಿತ್ರಾ ಹುಲೇಕಲ್ ಕಾರ್ಯಕ್ರಮ ನಿರೂಪಿಸಿದರು. ದೀಪಾ ಜಿ.ಎಸ್. ವಂದಿಸಿದರು.