ಪೋಷಕರು ನಿಮ್ಮ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದಾರೆ : ಡಾ.ಬಸವರಾಜ್ ಗದಗೆ
ಬಳ್ಳಾರಿ 20: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾಹು ಬಹುದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಪದವಿ ದಿನಾಚರಣೆ 2022 - 2023 ಸಂಭ್ರಮದ ಸಮಾರಂಭ ಜರಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಹಾಗೂ ವಲಯದ ಡಾ. ಬಸವರಾಜ ಗದಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಅವರ ಮುಂದಿನ ಜೀವನದ ಭವಿಷ್ಯತ್ತಿಗಾಗಿ ತೆಲುಗು ಸೂಪರ್ ಸಲಹೆಗಳನ್ನು ನೀಡುತ್ತಾ, ಈ ದಿನ ನೀವು ನಿಮ್ಮ ಪದವಿಯನ್ನು ಪೂರ್ಣಗೊಳಿಸುವುದು ನಿಮ್ಮ ಅಧ್ಯಯನದ ಅಂತ್ಯವಲ್ಲ ವಾಸ್ತವವಾಗಿ ಇದು ಒಂದು ಪ್ರಗತಿಪರ ಜೀವನದ ಆರಂಭ ವಾಗಿದೆ ಎಂದರು.
ಕಲ್ಯಾಣ ಕರ್ನಾಟಕದ ಪ್ರದೇಶದ ನಿಮ್ಮ ಸಂಸ್ಥೆಯ ಬಗ್ಗೆ ನೀವು ಹೆಮ್ಮೆ ಪಡಬೇಕು. ಕೆಲವರು ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ ಪೋಷಕರು ಶಿಕ್ಷಕರು ಸಮಾಜ ಕುಟುಂಬದ ಸದಸ್ಯರು ಇತ್ಯಾದಿ ಅವರ ನಂಬಿಕೆಯನ್ನು ಮರೆಯಬೇಡಿ ಎಂದು ವಿವರಿಸಿದರು. ನಂತರ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಅಲ್ಲಂ ಚನ್ನಪ್ಪ ಮಾತನಾಡುತ್ತಾ ವಿದ್ಯಾರ್ಥಿಗಳ ಬಂಗಾರದ ಭವಿಷ್ಯತ್ತಿಗಾಗಿ ನಮ್ಮ ಶಿಕ್ಷಣ ಸಂಸ್ಥೆ ಹಗಲು ಇರುಳು ಶ್ರಮಿಸುತ್ತಿರುವುದಾಗಿ ವಿವರಿಸಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ, ಆರು ವೈ ಎಂ ಸಿ ಆಡಳಿತ ಮಂಡಳಿಯ ಸದಸ್ಯ ಜಿಎಂ ಮಲ್ಲಿಕಾರ್ಜುನ ರೆಡ್ಡಿ, ರೂಪನ ಗುಡಿ ಬಸವರಾಜ ಜಾನೆಕುಂಟೆ ಪಂಪನಗೌಡ ಕೊರಲಗುಂದಿ ಬಸವನಗೌಡ ಹಲಕುಂದಿ ಸತೀಶ್ ಕುಮಾರ್ ವಿವಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಕೋರಿ ವಿರೂಪಾಕ್ಷಪ್ಪ, ಪ್ರಿನ್ಸಿಪಲ್ ಡಾ. ಹನುಮಂತರೆಡ್ಡಿ, ಡಾ. ಸವಿತಾ, ಡಾ ಶ್ರೀಪತಿ, ಡಾಽಽ ಗೀರೀಶ್, ವಿದ್ಯಾರ್ಥಿಯರು, ಪೋಷಕರು, ಸಿಬ್ಬಂದಿ ವರ್ಗ, ಸದಸ್ಯರು, ಇತರರು ಭಾಗವಹಿಸಿದ್ದರು.