ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಪೆನಲ್ ಆಯ್ಕೆ
ಚಿಕ್ಕೋಡಿ 13: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರ ಪತ್ತಿನ ಸಂಘದ ಚಿಕ್ಕೋಡಿ ವಿಭಾಗ ಚಿಕ್ಕೋಡಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಪೆನಲ್ನ ಗೋಪಾಲ ಭಜಂತ್ರಿ ಹಾಗೂ ಚಂದ್ರಶೇಖರ ಬಡಿಗೇರ ಇವರ ನೇತೃತ್ವದಲ್ಲಿ 17 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಸದಸ್ಯರು: ಬೀರ್ಪ ಬಂಡಗರ, ಮಲ್ಲಿಕಾರ್ಜುನ ಮಠಪತಿ, ವಿನಾಯಕ ಗುರವ, ಕಾಶಿನಾಥ ಸವದಿ, ಶ್ರೀಶೈಲ ಮಾಸ್ತಿಹೊಳಿ, ಸದಾನಂದ ಖೋತ, ಮಲ್ಲಿಕಾರ್ಜುನ ಸರಶೆಟ್ಟಿ, ಅನೀಲ ಕಾಂಬಳೆ, ವಿರೇಂದ್ರ ಪಾಟೀಲ, ಬಸವರಾಜ ರೊಟ್ಟಿ, ಕಿರಣ ನಸಲಾಪೂರೆ, ದಾದಾಪೀರ ಪೀರಜಾದೆ, ಶ್ರೀಕಾಂತ ನಾಯಿಕ, ಮಹೇಶ ಬುಡುಗೋಳ, ಸಂಜಯ ಕಾಳಿಂಗಗೋಳ, ಮಂಜುಳಾ ಹಾವನೂರ, ಸವಿತಾ ಹಳಿಜೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹರೀಶ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರುವ ಐದು ವರ್ಷದ ಅವಧಿಗೆ ವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿದ ಅನ್ನಪ್ಪ ಭೋಸಲೆ, ಐ.ಟಿ.ಸನದಿ, ಸಂಜು ಜೋಗೋಜಿ, ಪ್ರಕಾಶ ಪಾತ್ರೂಟ, ದೇವೇಂದ್ರ ಸಿಂಗಿ, ಅಯಲ್ಲವ್ವ ಭಜಂತ್ರಿ, ಕುಮಾರ ಹಳಿಂಗಳಿ, ಕಾಡೇಶ ಬಿರಾದಾರ, ಮಹಾದೇವ ಉದಗಟ್ಟಿ, ಅಣ್ಣಾಸಾಬ ಮಡಿವಾಳ, ಎಂ.ಎಲ್.ಬಸ್ತವಾಡ, ಬಸವರಾಜ ಕಾಗಲೆ, ಶಂಕರ ಕರೋಶಿ, ಜಮೀಲ ಮುಲ್ಲಾ, ಸಿದ್ದಪ್ಪ ತಳವಾರ, ಶೇಖರ ಲಮಾಣಿ, ಕುಮಾರ ಸಾಳುಂಕೆ, ಮಹಾದೇವ ಶಿರಗಾಂವಿ, ಮಾರುತಿ ಸೂರ್ಯವಂಶಿ ಮುಂತಾದವರು ಸಹಕರಿಸಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಶ್ರಮಿಸಿದ್ದಾರೆ ಎಂದು ಸಂಸ್ಥೆಯ ಮುಖಂಡ ಗೋಪಾಲ ಭಜಂತ್ರಿ ತಿಳಿಸಿದರು.