ಬೆಳಗಾವಿ

ಚುಳಕಿ ಗ್ರಾಮದಲ್ಲಿ ಪಾಂಡುರಂಗ ಡಿಂಡಿ ಉತ್ಸವ; ಶಾಸಕ ವಿಶ್ವಾಸ ವೈದ್ಯರಿಂದ ವಿಶೇಷ ಪೂಜೆ

ಚುಳಕಿ ಗ್ರಾಮದಲ್ಲಿ ಪಾಂಡುರಂಗ ಡಿಂಡಿ ಉತ್ಸವ; ಶಾಸಕ ವಿಶ್ವಾಸ ವೈದ್ಯರಿಂದ ವಿಶೇಷ ಪೂಜೆ

ಸವದತ್ತಿ 05 : ತಾಲೂಕಿನ ಚುಳಕಿ ಗ್ರಾಮದಲ್ಲಿ   ಪಾಂಡುರಂಗ ಡಿಂಡಿ ಉತ್ಸವ ಹಾಗೂ ಪ್ರವಚನ ಕಾರ್ಯಕ್ರಮವು ಶ್ರದ್ಧಾ ಭಕ್ತಿ ಮತ್ತು ಸಡಗರದಿಂದ ವಿಜೃಂಭಣೆಯಿಂದ ನಡೆಯಿತು.  ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಭಾಗವಹಿಸಿ. ವಿಠ್ಠಲ-ರುಕ್ಮಿಣಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ,   ಪಾಂಡುರಂಗ ದೇವರು ಎಲ್ಲರಿಗೂ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸಿದರು.  ಕಾರ್ಯಕ್ರಮದಲ್ಲಿ ಗ್ರಾಮದ ಪೂಜ್ಯರು, ಹಿರಿಯರು, ಸ್ಥಳೀಯ ಮುಖಂಡರು ಹಾಗೂ ಭಕ್ತಮಂಡಳಿ ಸದಸ್ಯರು ಉಪಸ್ಥಿತರಿದ್ದು, ಡಿಂಡಿ ಉತ್ಸವದ ಶೋಭಾಯಾತ್ರೆ ಮತ್ತು ಪ್ರವಚನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ