ಬಳ್ಳಾರಿ

ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ ಬಯಲಾಟ ಪ್ರದರ್ಶನ

ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ ಬಯಲಾಟ ಪ್ರದರ್ಶನ

ಬಳ್ಳಾರಿ 08: ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹೊನ್ನಳ್ಳಿ ಗ್ರಾಮದಲ್ಲಿ "ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ" ಬಯಲಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕ ಬಿ .ನಾಗೇಂದ್ರ ರವರು ನಾಟಕ ವೀಕ್ಷಿಸಿದರು. ಅಲ್ಲದೆ ಈ ಬಯಲಾಟ ಪ್ರದರ್ಶನಕ್ಕೆ 25 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಕಲಾವಿದರ ಪ್ರೀತಿಗೆ ಪಾತ್ರರಾಗಿ ಕಲಾಪ್ರೇಮ ಮೆರೆದಿದ್ದಾರೆ.  

ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ನಾಗೇಂದ್ರ ನಮ್ಮ ಹಳ್ಳಿಗರು ಸಾಂಪ್ರದಾಯಿಕ ನಾಟಕಗಳನ್ನು ನೋಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ಉಳಿಸುತ್ತಿದ್ದಾರೆ. ಅಲ್ಲದೆ ಇಂತಹ ಬೈಲಾಟ ಕಾರ್ಯಕ್ರಮವನ್ನು ತಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಈ ಬೈಲಾಟದ ನಾಟಕದಲ್ಲಿ ಸಾರಾಂಶವನ್ನು ತಾವೆಲ್ಲರೂ ನೋಡಿ ಅರಿತು ಬದುಕಬೇಕು ಏಕೆಂದರೆ ಈ ನಾಟಕದಲ್ಲಿ ಕೀಚಕನು ಯಾವ ರೀತಿ ಅನ್ಯಾಯಕ್ಕೆ ಒಳಗಾಗಿ ಸಾಯುತ್ತಾನೆ ಎನ್ನುವ ದೃಶ್ಯ ಇದರಲ್ಲಿ ಬರುತ್ತದೆ. ಆದ್ದರಿಂದ ಮನುಷ್ಯನು ಜೀವನದಲ್ಲಿ ಅಧರ್ಮದಿಂದ ಗೆಲ್ಲಲು ಯಾವತ್ತಿಗೂ ಸಾಧ್ಯವಿಲ್ಲ, ಆದರೆ ಧರ್ಮದಿಂದ ಮಾತ್ರ ಗೆಲ್ಲುವುದು ಸಾಧ್ಯ ಎಂದು ಹೇಳಿದರು.  

ಹೊನ್ನಳ್ಳಿ ಗ್ರಾಮದ ಆಂಜನೇಯ ಸ್ವಾಮಿ ನಿಮ್ಮೆಲ್ಲರಿಗೂ ಸುಖ-ಸಂತೋಷ, ಆಯುಷ್ಯ-ಆರೋಗ್ಯ ಮತ್ತು ಉತ್ತಮ ಬೆಳೆಯನ್ನು ನೀಡಿ ರೈತರಲ್ಲಿ ಹರುಷ ತರಲಿ, ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಯಲಾಟಗಳನ್ನು ಆಡಲು ಶಕ್ತಿ ನೀಡಲೆಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಪ್ರಾರ್ಥಿಸಿದರು.  

ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಕುಮಾರ​‍್ಪ, ಡಿ.ಸಿ.ಹನುಮಂತ, ವಿಶ್ವನಾಥ್, ಕುಮಾರಸ್ವಾಮಿ, ಸುಭಾನ್, ಅಸ್ಲಾಂ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮಂತ, ಸದಸ್ಯರಾದ ಕುಮಾರ​‍್ಪ, ಬಸವರಾಜ್, ಗೋವಿಂದ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಗೋವರ್ಧನ್ ರೆಡ್ಡಿ, ಅಣ್ಣ ನಾಗರಾಜ್, ಬೆಣಕಲ್ ಬಸವರಾಜ್ ಗೌಡ, ವಿ.ಎನ್ ಶ್ರೀನಾಥ್, ಭಟ್ಟಿ ಎರ್ರಿಸ್ವಾಮಿ, ಶೇಖರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಮಾನ್ಯ ಶಾಸಕರ ಅಭಿಮಾನಿಗಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ