ಹೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷರಾಗಿ ಪಾಂಡ್ರೆ ಅವಿರೋಧ ಆಯ್ಕೆ
ವೆಂಕಟೇಶ ದೇಶಪಾಂಡೆ
ಅಥಣಿ 27: ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಉಪಾಧ್ಯಕ್ಷರಾಗಿ ಅಥಣಿ ಹೆಸ್ಕಾಂ ವಿಭಾಗದ ಕಿರಿಯ ಅಭಿಯಂತರ ಎನ್.ಎಲ್.ಪಾಂಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ಪ್ರಥಮ ಬಾರಿಗೆ ಅಥಣಿ ಹೆಸ್ಕಾಂ ವಿಭಾಗಕ್ಕೆ ಉಪಾಧ್ಯಕ್ಷ ಸ್ಥಾನ ದೊರಕಿರುವುದು ಸ್ಥಳೀಯ ಸಿಬ್ಬಂದಿಯಲ್ಲಿ ಸಂತಸ ಮೂಡಿಸಿದೆ. ಎನ್.ಎಲ್.ಪಾಂಡ್ರೆ ಆಯ್ಕೆಯನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ಎಲ್. ಪಾಂಡ್ರೆ ಮಾತನಾಡಿ ನಾನು ಸೇವೆಗೆ 1986ರಲ್ಲಿ ಸೇರ್ಪಡೆಯಾಗಿದ್ದು 1989 ರಿಂದ ನೌಕರರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನು ಈ ಮೊದಲು ಕೇಂದ್ರ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದ ಅವರು ಈ ಮೊದಲು ನನ್ನ ಜೊತೆ ಸಹಕರಿಸಿದಂತೆ ಮುಂದೆಯೂ ಸಹ ಸಹಕರಿಸಿ ಎಂದರು.
ಕೆಪಿಟಿಸಿಎಲ್ ನೌಕರರ ಸಂಘದ ಸ್ಥಳೀಯ ಸಮಿತಿ ಕಾರ್ಯದಶರ್ಿ ಅಶೋಕ ವಾಲಿಕಾರ ಮಾತನಾಡಿ, ಎನ್.ಎಲ್.ಪಾಂಡ್ರೆಯವರು ನೌಕರರ ಬಡ್ತಿ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ಇಂತಹ ಒಬ್ಬ ಸಂಘಟಕ ನಮಗೆಲ್ಲ ದೊರಕಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಸಮಿತಿ ಅಧ್ಯಕ್ಷ ಎಂ.ಎಸ್.ಅವಟಿ ಮಾತನಾಡಿ, ನಮ್ಮ ಸಮಿತಿ ಪದಾಧಿಕಾಗಳು ಸದಸ್ಯರು ಎನ್.ಎಲ್.ಪಾಂಡ್ರೆಯವರ ಕಾರ್ಯಕ್ಕೆ ಕೈ ಜೋಡಿಸುತ್ತಾರೆ. ಪಾಂಡ್ರೆಯವರ ಅವಿರೋಧ ಆಯ್ಕೆಗೆ ಚಿಕ್ಕೋಡಿ ವೃತ್ತದ ಸಂಘಟನಾ ಕಾರ್ಯದಶರ್ಿ ರಾಯಬಾಗದ ಎಸ್.ಆರ್.ಶಿಂಧೆ ಸಹಕರಿಸಿದ್ದಾರೆ ಎಂದರು.
ಲೈನ್ ಮನ್ ಯು.ಟಿ.ಮಜ್ಜಗಿ ಮಾತನಾಡಿ, ಹೆಸ್ಕಾಂ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಜ್ಯೂನಿಯರ ಲೈನ್ ಮನ್ ದಿಂದ ಅಸಿಸ್ಟಂಟ್ ಲೈನ್ ಮನ್ ಆಗಿ ಅತೀ ಕಡಿಮೆ ಅವಧಿಯಲ್ಲಿ ಬಡ್ತಿ ಆಗಿರುವುದಕ್ಕೆ ಎನ್.ಎಲ್.ಪಾಂಡ್ರೆಯವರ ಪ್ರಯತ್ನವೇ ಕಾರಣ ಎಂದರು.
ಸ್ಥಳೀಯ ಸಮಿತಿಯ ಉಪಾಧ್ಯಕ್ಷ ವ್ಹಿ.ಬಿ.ಹೊಸಮನಿ, ಸಹ ಕಾರ್ಯದಶರ್ಿ ಆರ್.ಎನ್.ಉಪ್ಪಾರ, ಖಜಾಂಚಿ ಎಸ್.ಎಸ್.ಶಿವಪುರ, ಸದಸ್ಯರಾದ ಬಿ.ಎಂ.ಪಾಟೀಲ, ಆರ್.ವ್ಹಿ.ಮಾಲಗಾವಿ, ಪಿ.ಎಸ್.ಮೆಣಸಿನಕಾಯಿ, ಆರ್.ಎಲ್. ಗೋಟೂರ, ಪ್ರಾಥಮಿಕ ಸಮಿತಿಯ ಅಧ್ಯಕ್ಷ ಬಿ.ವ್ಹಿ.ಪೂಜಾರಿ, ಉಪಾಧ್ಯಕ್ಷರಾದ ಪಿ.ವ್ಹಿ.ಮುಗಳಿ, ಕಾರ್ಯದಶರ್ಿ ಎಸ್.ವ್ಹಿ.ಗಣಮುಖಿ, ಸಹಕಾರ್ಯದಶರ್ಿ ಯು.ಟಿ.ಮಜ್ಜಗಿ, ಖಜಾಂಚಿ ಪಿ.ಎಸ್.ವಾಲಿಕಾರ, ಸದಸ್ಯರಾದ ಎಂ.ಎಂ.ಹೊನ್ನೋಳ್ಳಿ, ಎನ್.ವ್ಹಿ.ವಾಗರೆ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು