ಜಮ್ಮು ಕಾಶ್ಮೀರ : ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್
ಜಮ್ಮು, ಡಿಸೆಂಬರ್ 05: ಕೇಂದ್ರಾಡಳಿತ ಪ್ರದೇಶವಾದ ಜಮ್ಮು
ಕಾಶ್ಮೀರದ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಅಪ್ರಚೋದಿತವಾಗಿ ಗುಂಡು ಹಾರಿಸುವ
ಮೂಲಕ ಪಾಕಿಸ್ತಾನ ಪಡೆಗಳು ಶನಿವಾರ ಕದನ ವಿರಾಮವನ್ನು ಉಲ್ಲಂಘಿಸಿವೆ.
ಪಾಕಿಸ್ತಾನದ ಸೈನಿಕರು ಬೆಳಿಗ್ಗೆ ಸುಮಾರು 11.40 ಗಂಟೆಗೆ, ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಗುಂಡು ಹಾರಿಸುವುದರ ಮೂಲಕ ಮತ್ತು ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಮಾರ್ಟಾರ್ ಶೆಲ್ ದಾಳಿ ಮಾಡುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
"ಭಾರತೀಯ ಸೇನೆಯು ಗಡಿಯಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಸೂಕ್ತವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದೆ" ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನಿ ರೇಂಜರ್ಸ್ ಕತುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಹಳ್ಳಿಗಳ ಮೇಲೆ ಶೆಲ್ ದಾಳಿ ನಡೆಸಿದೆ. "ಸ್ವಂತ ಬಿಎಸ್ಎಫ್ ಪಡೆಗಳು ಗುಂಡಿನ ದಾಳಿಗೆ ಪ್ರತೀಕಾರ ತೀರಿಸಿಕೊಂಡಿವೆ" ಎಂದು ಅವರು ತಿಳಿಸಿದ್ದಾರೆ.