ಮನರಂಜನೆ

ಪೇಜಾವರ ಶ್ರೀ ಕ್ಷಮೆಯಾಚಿಸಿದ ಹಂಸಲೇಖ

ಪೇಜಾವರ  ಶ್ರೀ  ಕ್ಷಮೆಯಾಚಿಸಿದ  ಹಂಸಲೇಖ

ಬೆಂಗಳೂರು, ನ 15  -  ಪೇಜಾವರ  ಶ್ರೀಗಳ   ಬಗ್ಗೆ   ಚಲನ  ಚಿತ್ರ   ಸಂಗೀತ  ನಿರ್ದೇಶಕ   ಹಂಸಲೇಖ    ಅವರು    ಮೈಸೂರಿನಲ್ಲಿ  ಇತ್ತೀಚಿಗೆ  ನಡೆದ   ಸಮಾರಂಭವೊಂದರಲ್ಲಿ    ಆಡಿದ   ಮಾತುಗಳಿಗೆ     ಸಾರ್ವಜನಿಕ   ವಲಯದಿಂದ  ಅಸಮಧಾನ   ವ್ಯಕ್ತಗೊಂಡ  ಹಿನ್ನೆಲೆಯಲ್ಲಿ   ಸ್ವತಃ   ಹಂಸಲೇಖ  ಅವರು   ಕ್ಷಮೆ  ಯಾಚಿಸಿದ್ದಾರೆ.
ಸಮಾರಂಭದಲ್ಲಿ  ಪೇಜಾವರ  ಸ್ವಾಮೀಜಿಗಳು    ದಲಿತರ   ಮನೆಗೆ  ತೆರಳುವ   ವಿಷಯ  ಪ್ರಸ್ತಾಪಿಸಿದ್ದ    ಹಂಸಲೇಖ   ದಲಿತರ ಮನೆಗೆ ಬಲಿತರು ಹೋಗುವುದು  ದೊಡ್ಡ ವಿಷಯ ಎಂದು ನನಗೆ ಅನಿಸದು   ದಲಿತರನ್ನು ಬಲಿತರು  ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು.  ದಲಿತರು ಮುಟ್ಟಿದ   ಪಾತ್ರೆಗಳನ್ನು  ನಾವು  ತೊಳೆಯುತ್ತೇವೆ ಎಂದು  ಬಲಿತರು ಹೇಳಬೇಕು  ಎಂದು  ಹೇಳಿದ್ದರು.

ಈ  ಮಾತುಗಳಿಗೆ     ಆಕ್ರೋಶ ವ್ಯಕ್ತವಾದ   ಕಾರಣ    ಹಂಸಲೇಖ   ವಿಡಿಯೋ  ಮೂಲಕ  ಕ್ಷಮೆಯಾಚಿಸಿದ್ದಾರೆ.    ನನಗೆ  ಗೊತ್ತಿದೆ.  ಎಲ್ಲ ಮಾತುಗಳಿಗೂ ಅದು ವೇದಿಕೆಯಲ್ಲ. ’’ಆ  ವೇದಿಕೆಯಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕಿತ್ತು,   ಆದರೆ ತಪ್ಪಾಗಿದೆ. ಅಸ್ಪೃಶ್ಯತೆ ಎಂಬುದು  ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕಲು   ಪೇಜಾವರದಂತಹ  ಗುರು-ಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಅಪಾರ‌ ಗೌರವವಿದೆ’’ ಎಂದು  ಹಂಸಲೇಖ ಹೇಳಿದ್ದಾರೆ.

ಸುದ್ದಿ ಓದಿ