ಪದ್ಮರಾಜ ಮಹಿಳಾ ಸ್ವತಂತ್ರ ಪಪೂ ಕಾಲೇಜ್ ಫಲಿತಾಂಶ ಅತ್ಯುತ್ತಮ

ಸಿಂದಗಿ 12: 2023-2024 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು 173 ಜನ ವಿದ್ಯಾರ್ಥಿನಿಯರಲ್ಲಿ 54 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿ, 101 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, 11 ವಿದ್ಯಾರ್ಥಿನಿಯರು  ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

 ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ ಒಟ್ಟು  46 ವಿದ್ಯಾರ್ಥಿನಿಯರಲ್ಲಿ 13 ಅತ್ಯುನ್ನತ ಶ್ರೇಣಿ, 28 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ, ವಿಜ್ಞಾನ ಭಾಗದಿಂದ ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿನಿಯರಲ್ಲಿ 10 ಅತ್ಯುನ್ನತ ಶ್ರೇಣಿ, 20 ಪ್ರಥಮ ಶ್ರೇಣಿ, 03 ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ.  

ವಿಜ್ಞಾನ ವಿಭಾಗದಲ್ಲಿ ಕಾಲೇಜಿನ ಒಟ್ಟು ಫಲಿತಾಂಶ 100ಅ ರಷ್ಟಾಗಿರುತ್ತದೆ. ಭೂಗೋಳಶಾಸ್ತ್ರ ವಿಷಯದಲ್ಲಿ 3 ಜನ ವಿದ್ಯಾರ್ಥಿನಿಯರು, ರಾಜ್ಯಶಾಸ್ತ್ರ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಅರ್ಥಶಾಸ್ತ್ರ ವಿಷಯದಲ್ಲಿ ಒರ್ವ ವಿದ್ಯಾರ್ಥಿನಿ, ಶಿಕ್ಷಣಶಾಸ್ತ್ರ ವಿಷಯದಲ್ಲಿ ಒರ್ವ ವಿದ್ಯಾರ್ಥಿನಿ, ಇತಿಹಾಸ ವಿಷಯದಲ್ಲಿ ಒರ್ವ ವಿದ್ಯಾರ್ಥಿನಿಯು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಹೀಗೆ ಕಾಲೇಜಿನ ಒಟ್ಟು ಫಲಿತಾಂಶ 100 ಕ್ಕೆ 96.42ಅ ರಷ್ಟಾಗಿರುತ್ತದೆ.  

ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಚೇರಮನ್ನರು ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.