ಶಿಗ್ಗಾವ್

ಭತ್ತದ ಹುಲ್ಲಿನ ಬಣವಿಗೆ ಬೆಂಕಿ

ಭತ್ತದ ಹುಲ್ಲಿನ ಬಣವಿಗೆ ಬೆಂಕಿ

ಲೋಕದರ್ಶನ ವರದಿ

ಶಿಗ್ಗಾವಿಃ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 2 ಎಕರೆ 11 ಗುಂಟೆ ಜಮೀನಿನಲ್ಲಿ ಬೆಳೆದ ಭತ್ತದ ಹುಲ್ಲಿನ ಬಣವೆ ಸುಟ್ಟು ಕರಕಲಾದ ಘಟನೆ ಸೋಮವಾರ ಜರುಗಿದೆ.

ಗ್ರಾಮದ ರೈತ ಬಸವಂತಪ್ಪ ಪಕೀರಪ್ಪ ರಾಮನಕೊಪ್ಪ ಎಂಬುವರಿಗೆ ಸೇರಿದ ಬಣವೆ ಇದಾಗಿದ್ದು ಘಟನೆಯಲ್ಲಿ ಎರಡು ಎತ್ತುಗಳಿಗೂ ಸಹ ಬೆಂಕಿ ತಗುಲು ಗಾಯಗಳಾಗಿವೆ ಎಂದು ತಿಳಿದು ಬಂದಿದೆ ಸ್ಥಳಕ್ಕೆ ಶಿಗ್ಗಾವಿ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ 

ಸುದ್ದಿ ಓದಿ