ಲೋಕ ಕಲ್ಯಾಣಕ್ಕಾಗಿ ಬಸವಲಿಂಗೇಶ್ವರ ಶ್ರೀಗಳಿಂದ ಪಾದಯಾತ್ರೆ
ಲೋಕದರ್ಶನ ವರದಿ
ಯಲಬುರ್ಗಾ 06: ಪಟ್ಟಣದ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳಿಂದ ಗಜೇಂದ್ರಗಡ ಪಟ್ಟಣದಕ್ಕೆ ಸುಮಾರು 100 ಜನ ಭಕ್ತರೊಂದಿಗೆ ಲೋಕ ಕಲ್ಯಾಣಕ್ಕಾಗಿ ಶುಕ್ರವಾರ 16 ಕಿ.ಮೀ ಪಾದಯಾತ್ರೆ ಆರಂಭವಾಯಿತು.
ಶ್ರಾವಣ ಶುಕ್ರವಾರದ ಅಂಗವಾಗಿ ಪಟ್ಟಣದ ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳಿಂದ ಹಾಗೂ ಬಸಲಿಂಗೇಶ್ವರ ಯೋಗ ಸಮಿತಿ, ಬಸವಲಿಂಗೇಶ್ವರ ಭಜನಾ ಮಂಡಳ ಹಾಗೂ ಸುಮಾರು 100 ಜನ ಭಕ್ತರೊಂದಿಗೆ ಲೋಕ ಕಲ್ಯಾಣಕ್ಕಾಗಿ ಶ್ರೀಗಳ ಭಕ್ತ ಸಮೂಹದೊಂದಿಗೆ ಪಾದಯಾತ್ರೆ ನಡೆಯಿತು.
ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಮಸ್ತ ಜೀವ ರಾಶಿಗಳಿಗೆ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಲೋಕ ಕಲ್ಯಾಣಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನನ್ನ ಭಕ್ತ ಸಮೂಹದೊಂದಿಗೆ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಂಬರೀಶ್ ಹುಬ್ಬಳ್ಳಿ, ಬಸಲಿಂಗೇಶ್ವರ ಭಜನಾ ಮಂಡಳ ಅಧ್ಯಕ್ಷ ಈಶಪ್ಪ ಸ್ಟಾಂಪಿನ, ಮುಖಂಡ ದೊಡ್ಡಯ್ಯ ಗುರವಿನ, ದೊಡ್ಡಬಸಪ್ಪ ಹಕ್ಕಾರಿ, ಈಶಪ್ಪ ಬನ್ನಿಕೊಪ್ಪ, ಮಲ್ಲಪ್ಪ ಭೂತೆ, ಮುತ್ತಪ್ಪ ಹಡಗಲಿ, ಶರಣಪ್ಪ ದಿವಟರ ವೀರಭದ್ರಯ್ಯ ಗಂಧದ, ಮಂಜುನಾಥ ಕಮ್ಮಾರ, ಈಶಪ್ಪ ಕೊತ್ತಲ್, ಈರಣ್ಣ ಚಾಕ್ರಿ, ಡಾ. ವಿದ್ಯಾಶ್ರೀ ಕುಡಗುಂಟಿ, ರತ್ನ ಸ್ಟಾಂಪಿನ, ಸುನೀತಾ ಪತಂಗರಾಯ, ರಾಚಮ್ಮ ಗದ್ದಿ, ಸಾವಿತ್ರಮ್ಮ ಹುಲ್ಲೂರು, ಸೇರಿ ಅಪಾರ ಭಕ್ತರು ಇದ್ದರು.