ಕಾರವಾರದಲ್ಲಿ ಪವರ್ ಸ್ಟಾರ್ : ಕುಮಟಾ ಅಭಿಮಾನಿಗಳ ಸಂಭ್ರಮ
ಬೆಂಗಳೂರು, ಜ 06:ಸ್ಯಾಂಡಲ್ವುಡ್ ನಟ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಂಡು ಕಾರವಾರದ ಕುಮಟಾ ಮಂದಿ ಸಂಭ್ರಮಿಸಿದ್ದಾರೆ.ತಮ್ಮ ಕಚೇರಿಯ ಅಕೌಂಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಗುರುರಾಜ್ ಎಂಬುವವರ ವಿವಾಹದಲ್ಲಿ ಭಾಗಿಯಾಗಲು ಬುಧವಾರ ಅಪ್ಪು ಉತ್ತರ ಕನ್ನಡ ಜಿಲ್ಲೆಯ ಕುಮಟಾಕ್ಕೆ ಭೇಟಿ ನೀಡಿದರು. ಕುಮಟಾ ಪಟ್ಟಣದ ದೇವರಹಕ್ಕಲ ಸಭಾ ಭವನದಲ್ಲಿ ನೂತನ ವಧು-ವರರಿಗೆ ಹೊರಬರುವುದನ್ನೇ ಕಾಯುತ್ತಿದ್ದ ಅಭಿಮಾನಿಗಳು, ಅವರು ಹೊರಬರುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸಿದರು.ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.