ಪಿಎಸ್ಐ ರಾಕೇಶ ಆಹಾರ ಕಿಟ್ ವಿತರಣೆ
ಚಿಕ್ಕೋಡಿ : ಕೊರೊನಾ ಲಾಕಡೌನ ಬಡ ಕುಟುಂಬಗಳಿಗೆ ಸಾಕಷ್ಟು ಸಂಕಷ್ಟ ತಂದೊಡ್ಡಿದ್ದೆ, ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ನೆರವು ನೀಡಲು ಚಿಕ್ಕೋಡಿ ಹಾಗೂ ನಿಪ್ಪಾಣಿ ಪೊಲೀಸ್ ಠಾಣೆಯ ಪಿಎಸ್ಐ ಮುಂದಾಗಿದ್ದಾರೆ.ಲಾಕ್ಡೌನ್ ಪಾಲನೆ ಜೊತೆ ನೊಂದವರ ಹೊಟ್ಟೆ ತುಂಬಿಸಲು ಕಾನೂನು ಪಾಲನೆ ಜೊತೆ ಸಮಾಜ ಸೇವೆಗೆ ಇಬ್ಬರು ಅಧಿಕಾರಿಗಳು ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಚಿಕ್ಕೋಡಿ ಉಪವಿಭಾಗದ ಕೆಎ: 23 ಪೇಸಬುಕ್ ಪುಟ ಸಹಭಾಗಿತ್ವದಲ್ಲಿ ಹಾಗೂ ಬೆಳಗಾವಿ ಜಿಲ್ಲಾ ಪೋಲಿಸ್ ಅಧಿಕಾರಿಗಳಿಂದ ನಿಸ್ವಾರ್ಥ ಸೇವೆ. ಚಿಕ್ಕೋಡಿ ಪೋಲಿಸ್ ಠಾಣೆ ಪಿಎಸ್ಐ ರಾಕೇಶ್ ಬಗಲಿ ಹಾಗೂ ನಿಪ್ಪಾಣಿ ಶಹರ ಪೋಲಿಸ್ ಠಾಣೆ ಪಿಎಸ್ಐ ಅನಿಲ್ ಕುಂಬಾರ ಇಬ್ಬರೂ ಅಧಿಕಾರಿಗಳಿಂದ ಅಹಾರ ಸಾಮಗ್ರಿಗಳ ಕಿಟ್ ವಿತರಣೆ.ಲಾಕ್ಡೌನ್ ನಿಂದಾಗಿ ನೊಂದವರನ್ನು ಗುರುತಿಸಿ ನೆರುವು ನೀಡಲು ಮುಂದಾದ ಈ ಇಬ್ಬರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೇ ಹಸುವಿನಿಂದ ನರಳುತ್ತಿರುವ ಕುಟುಂಬಗಳನ್ನು ಗುತರ್ಿಸಿ ಸುಮಾರು 50ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಸೇವೆಯ ಜೊತೆಗೆ ಕಷ್ಟದಲ್ಲಿ ಇರುವ ಕುಟುಂಬಗಳ ನೆರವಿಗೆ ದಾವಿಸಿರುವ ಅಧಿಕಾರಿಗಳ ಸೇವೆಗೆ ಚಿಕ್ಕೋಡಿ ಹಾಗೂ ನಿಪ್ಪಾಣಿ ಭಾಗದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ