ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಜನ್ಮದಿನ- ದೇಶದ ಗೌರವ ನಮನ
ನವದೆಹಲಿ, ಡಿಸೆಂಬರ್ 3 :ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ 133 ನೇ ಜನ್ಮ ದಿನಾಚರಣೆಯ ಅಂಗವಾಗಿ ದೇಶ ಇಂದು ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೊವಿಂದ್ , ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡ ಅವರು ಗಳು ಗೌರವ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಡಾ.ರಾಜೇಂದ್ರ ಪ್ರಸಾದ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ದೇಶದ ರಾಜಕೀಯ ರಂಗದಲ್ಲಿ ಅವರ ಸಲ್ಲಿಸಿದ ನಿಸ್ವಾರ್ಥ ಸೇವೆ ಮರೆಯಲಾಗದ್ದು ಮತ್ತು ದೂರದೃಷ್ಟಿಯ ನಾಯಕರಾಗಿದ್ದರು ಎಂದು ಸಂದೇಶದಲ್ಲಿ ಗುಣಗಾನ ಮಾಡಿದ್ದಾರೆ.ಇತರರ ಬಗೆಗಿನ ಅವರ ಅನುಕಂಪ , ಸರಳ ಬದುಕು ಮತ್ತು ಸಹಾನುಭೂತಿಗಾಗಿ ಅವರನ್ನು ದೇಶ ಸದಾ ಸ್ಮರಿಸುತ್ತಿದೆ. 1884 ರಲ್ಲಿ ಈ ದಿನ ಜನಿಸಿದ ಅವರು 1950 ರ ಜನವರಿ 24 ರಿಂದ 1962 ರ ಮೇ 13 ರವರೆಗೆ ದೇಶದ ಮೊದಲ ರಾಷ್ಟ್ರಪತಿಯಾಗಿದ್ದರು.