ಆಪ್ತಮಿತ್ರ ಅರುಣ್ ಜೇಟ್ಲಿ ಸೇವೆ ಸ್ಮರಿಸಿದ ಮೋದಿ , ಬಿಜೆಪಿ ನಾಯಕರು
ನವದೆಹಲಿ, ಆಗಸ್ಟ್ 24: ಆಪ್ತ ಮಿತ್ರ, ಮಾರ್ಗದರ್ಶಕ ಮೇಲಾಗಿ ಉತ್ತಮ ಚಿಂತಕರಾಗಿ, ದಕ್ಷ ಸಚಿವರಾಗಿ ಅಮೂಲ್ಯ ಸೇವೆ ಸಲ್ಲಿಸಿದ ಸಹೋದ್ಯೋಗಿ ಅರುಣ್ ಜೇಟ್ಲಿಯನ್ನು ಕಳೆದುಕೊಂಡಿರುವುದು ಮನಸ್ಸಿಗೆ ಬಹಳ ಬೇಸರ, ನೋವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗಣಗಾನ ಮಾಡಿದ್ದಾರೆ.
ಅರುಣ್ ಜೇಟ್ಲಿಯನ್ನು ಪ್ರಥಮ ಪುಣ್ಯತಿಥಿಯ ಅಂಗವಾಗಿ ಅವರು ಗೆಳೆಯನ್ನು ನೆನೆಕೊಂಡು ಭಾವುಕರಾಗಿ ಟ್ವೀಟ್ ಮೂಲಕ ಮನಸ್ಸಿನ ನೋವು ನೋವು ಹೊರಹಾಕಿದ್ದಾರೆ. ಅವರು ಶ್ರದ್ಧೆಯಿಂದ ದೇಶಕ್ಕೆ ಬಹಳ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದೂ ಹೇಳಿದ್ದಾರೆ .
ಈ ದಿನ, ಕಳೆದ ವರ್ಷ, ನಾವು ಅರುಣ್ ಜೇಟ್ಲಿ ಜಿ ಅವರನ್ನು ಕಳೆದುಕೊಂಡೆವು. ನನ್ನ ಆಪ್ತ ಸ್ನೇಹಿತನನ್ನು ನಾನು ಬಹಳವಾಗಿ ಕಳೆದುಕೊಂಡಿದ್ದೇನೆ. ಅವರ ಬುದ್ಧಿಶಕ್ತಿ, ಕಾನೂನು ಕುಶಾಗ್ರಮತಿ ಮರೆಯಲಾಗದ ಸಂಗತಿ ಎಂದರು
ಪ್ರಧಾನಮಂತ್ರಿಯವರಲ್ಲದೆ ಕೇಂದ್ರ , ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಇತರ ಉನ್ನತ ಬಿಜೆಪಿ ನಾಯಕರು ಜೈಟ್ಲಿ ಅವರಿಗೆ ಗೌರವ ಶ್ರದ್ದಾಂಜಲಿ ಸಲ್ಲಿಸಿ, ಪಕ್ಷ ಮತ್ತು ಸರ್ಕಾರದಲ್ಲಿ ಅವರು ಮಾಡಿದ ಕೆಲಸದ ಬಗ್ಗೆ ಗುಣಗಾನ ಮಾಡಿದ್ದಾರೆ.
ಈ ನಡುವೆ ಜೈಟ್ಲಿ ನೆನಪಿಗಾಗಿ ಪ್ರಾರ್ಥನಾ ಸಭೆಯಲ್ಲಿನ ವೀಡಿಯೊವನ್ನು ಪ್ರಧಾನಿ ಟ್ಯಾಗ್ ಮಾಡಿದ್ದಾರೆ. ಮಾಜಿ ಹಣಕಾಸು ಸಚಿವರ ಸಾವಿನ ಸುದ್ದಿ ಬಂದಾಗ ಪ್ರಧಾನಿ ಮೋದಿ ಅವರು ಮೂರು ರಾಷ್ಟ್ರಗಳ ಭೇಟಿಯ ಎರಡನೇ ಹಂತದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸದಲ್ಲಿದ್ದರು .