ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಜನ್ಮದಿನ : ಪ್ರಧಾನಿ ಶ್ರದ್ಧಾಂಜಲಿ
ನವದೆಹಲಿ, ಡಿ 03 :ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ, ಸಮಾಜ ಸೇವಕ, ಸ್ವಾತಂತ್ರ್ಯ ಹೋರಾಟಗಾರ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಗುರುವಾರ, ಪ್ರಧಾನಿ ನರೇಂದ್ರ ಮೋದಿಯವರು ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಡಾ.ಪ್ರಸಾದ್ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನವನ್ನು ನಿರ್ಮಿಸುವಲ್ಲಿ ಸಾಟಿಯಿಲ್ಲದ ಪಾತ್ರ ವಹಿಸಿದ್ದಾರೆ ಎಂದು ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಸಂದೇಶ ರವಾನಿಸಿರುವ ಮೋದಿ, "ಸರಳ ಜೀವನ ಮತ್ತು ಉನ್ನತ ಚಿಂತನೆಯ ತತ್ವವನ್ನು ಆಧರಿಸಿದ ಅವರ ಜೀವನವು ದೇಶದ ಜನರಿಗೆ ಯಾವಾಗಲೂ ಸ್ಫೂರ್ತಿ ನೀಡುತ್ತದೆ" ಎಂದು ಹೇಳಿದ್ದಾರೆ.
ಡಾ.ಪ್ರಸಾದ್ ಅವರು 1884 ಡಿಸೆಂಬರ್ 3ರಂದು ಬಿಹಾರದ ಸಿವಾನ್ನಲ್ಲಿ ಜನಿಸಿದರು. ಅವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವಕೀಲರೂ ಆಗಿದ್ದರು. ಮತ್ತು ಸ್ವಾತಂತ್ರ್ಯದ ನಂತರ ರಾಷ್ಟ್ರದ ಮೊದಲ ರಾಷ್ಟ್ರಪತಿಯಾಗಿದ್ದರು. 1950 ರಿಂದ 1962 ರ ನಡುವೆ ದೀರ್ಘಾವಧಿ ಕಾರ್ಯನಿರ್ವಹಿಸಿದ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ರಾಜೇಂದ್ರ ಪ್ರಸಾದ್ ಪಾತ್ರರಾಗಿದ್ದಾರೆ.