‘ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಇದೀಗ ನನಸು’
ಲೋಕದರ್ಶನ ವರದಿ
ಬಳ್ಳಾರಿ 22: ಕಳೆದ ಎರಡು ವರ್ಷಗಳಿಂದ ಸತತವಾಗಿ ದೇಶವನ್ನು ಕಾಡುತ್ತಿರುವ ಕೊರೊನಾ ಮಹಾಮ್ಮಾರಿಯಿಂದ ಭಾರತವನ್ನು ಸುರಕ್ಷಿತವಾಗಿಡಬೇಕೆಂಬ ಪಣತೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಇದೀಗ ನನಸಾಗಿದೆ. ಇದೀಗ ಭಾರತದಲ್ಲಿ 100 ಕೋಟಿಗೂ ಅಧಿಕ ಜನರು ಕೊರೊನಾ ಲಸಿಕೆ ಪಡೆದಿದ್ದ ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹಾಗೂ ಬಿಜೆಪಿ ಬಳ್ಳಾರಿ ಜಿಲ್ಲಾ ವಕ್ತಾರ ಬಿ.ಕೆ.ಸುಂದರ್ ಅವರು ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಷ್ಟು ವೇಗವಾಗಿ ಲಸಿಕೆ ಪಡೆಯುವುದಕ್ಕೆ ಕಾರಣೀಭೂತರಾದ ಕೊರೊನಾ ವಾರಿಯರ್ಸನ್ನು ನಾವು ಇಂದು ಸ್ಮರಿಸಲೇಬೇಕೆಂದರು. ಇಂತಹ ಅದ್ಭುತ ಸಾಧನೆಗೆ ಪ್ರಧಾನಿ ಮೋದಿ ಅವರು ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನುಳಿದವರೆಲ್ಲರಿಗೂ ಕೊರೊನಾ ಲಸಿಕೆ ನೀಡಿ ಇಡೀ ದೇಶವನ್ನೇ ಕೊರೊನಾ ಮುಕ್ತವನ್ನಾಗಿಸುವುದು ಸಮಯ ಶೀಘ್ರದಲ್ಲೇ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸಗಳಾದ ಕಿರಿಯ ಆರೋಗ್ಯ ಸಹಾಯಕಿ ಚೇತನ, ಮಂಜುಳ, ಜಿಲ್ಲಾ ಆರೋಗ್ಯ ಇಲಾಖೆಯ ನರ್ಸಿಂಗ್ ಅಧಿಕಾರಿ ಬಿ.ಕಸ್ತೂರಿ, ರಾಜು, ಆಶಾ ಕಾರ್ಯಕರ್ತೆಯರಾದ ಶ್ಯಾಮಲ, ನಾಗವೇಣಿ, ರೋಟರಿ ಯು.ಎಫ್.ಡಬ್ಲ್ಯೂ.ಸಿ.ಯ ಡಾ. ಸುಧಾರಾಣಿ, ಆಶಾ ಕಾರ್ಯಕರ್ತೆಯರಾದ ಭಾಗ್ಯ, ಶುಶ್ರೂಷಕಿಯರಾದ ಲತಾ, ಶೋಭ, ಕಾವ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ನೆರೆದ ಎಲ್ಲರಿಗೂ ಸಿಹಿ ಹಂಚಿಕ ವಿಜೃಂಭಣೆಯ ಯಶಸ್ವಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೋತ್ಕರ್ ಶ್ರೀನಿವಾಸ್, ಅನಿಲ್ ನಾಯ್ಡು, ಬರಾಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯರಾದ ಹನುಮಂತ, ಕೆ.ಎಸ್.ಅಶೋಕ್ಕುಮಾರ್, ಇಬ್ರಾಹಿಂಬಾಬು, ಹನುಮಂತ ಗುಡಗಂಟಿ, ಹೇಮಣ್ಣ, ಸುರೇಂದ್ರಬಾಬು, ನಗರ ಘಟಕ ಸಹ ಕಾರ್ಯದರ್ಶಿ ರಾಮಾಂಜಿನಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಕೃಷ್ಣಾರೆಡ್ಡಿ, ನಗರ ಮಾಧ್ಯಮ ಸಂಚಾಲಕರಾದ ರಾಜೀವ್, ಎಸ್.ಟಿ. ಮೋರ್ಚಾದ ವೀರೇಶ್, ರೈತ ಮೋರ್ಚಾದ ನಾರಾಯಣ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.