ರಾಷ್ಟ್ರೀಯ

ಉತ್ತರಾಖಂಡ ಮತ್ತಷ್ಟು ಪ್ರಗತಿ ಸಾಧಿಸಲಿ: ಪ್ರಧಾನಿ ಮೋದಿ

ಉತ್ತರಾಖಂಡ ಮತ್ತಷ್ಟು ಪ್ರಗತಿ ಸಾಧಿಸಲಿ: ಪ್ರಧಾನಿ ಮೋದಿ

ನವದೆಹಲಿ, ನವೆಂಬರ್ 09: ಉತ್ತರಾಖಂಡ ರಾಜ್ಯ ರಚನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದು, ಉತ್ತರೋತ್ತರ ಪ್ರಗತಿಗಾಗಿ ಹಾರೈಸಿದ್ದಾರೆ.  

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ರಾಜ್ಯ ಸಂಸ್ಥಾಪನಾ ದಿನದಂದು ಉತ್ತರಾಖಂಡದ ನಿವಾಸಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಪ್ರಗತಿಯ ಹಾದಿಯಲ್ಲಿ   ಮುನ್ನಡೆಯುತ್ತಿರುವ ಈ ರಾಜ್ಯವು ನೈಸರ್ಗಿಕ ಸಂಪತ್ತು ಮತ್ತು ನೈಸರ್ಗಿಕ   ಸೌಂದರ್ಯದಿಂದ ಕೂಡಿದ್ದು, ಅಭಿವೃದ್ಧಿಯ ಹೊಸ ಎತ್ತರಗಳನ್ನು ಮುಟ್ಟಲಿ" ಎಂದು ಹೇಳಿದ್ದಾರೆ.

ಕಳೆದ 2000ರಲ್ಲಿ ಇದೇ ದಿನದಂದು ಉತ್ತರಪ್ರದೇಶದಿಂದ ಉತ್ತರಾಖಂಡವನ್ನು ವಿಭಜಿಸಿ ನೂತನ ರಾಜ್ಯವನ್ನು ರಚಿಸಲಾಯಿತು. 

ಸುದ್ದಿ ಓದಿ