ರಾಷ್ಟ್ರೀಯ

ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಉತ್ಸವ ಮತ್ತಷ್ಟು ಬಲಪಡಿಸಿ; ಪ್ರಧಾನಿ ಮೋದಿ ಮನವಿ

ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ಉತ್ಸವ ಮತ್ತಷ್ಟು ಬಲಪಡಿಸಿ; ಪ್ರಧಾನಿ ಮೋದಿ ಮನವಿ

ನವದೆಹಲಿ, ನವೆಂಬರ್ 3: ಬಿಹಾರ ವಿಧಾನಸಭೆಯ  ಎರಡನೇ ಹಂತ ಮತದಾನ ಸೇರಿದಂತೆ  ದೇಶಾದ್ಯಂತ  ಹಲವು   ಸ್ಥಳಗಳಲ್ಲಿ   ಇಂದು   ವಿಧಾನಸಭಾ  ಕ್ಷೇತ್ರಗಳಿಗೆ    ಉಪ ಚುನಾವಣೆ   ನಡೆಯುತ್ತಿದೆ.  ಈ  ಹಿನ್ನಲೆಯಲ್ಲಿ ಚುನಾವಣೆ ನಡೆಯುವ ಮತ ಕ್ಷೇತ್ರಗಳಲ್ಲಿ  ಜನರು  ಭಾರಿ ಸಂಖ್ಯೆಯಲ್ಲಿ ಮತಚಲಾಯಿಸಬೇಕೆಂದು  ಪ್ರಧಾನಿ  ಮೋದಿ   ಮನವಿ ಮಾಡಿದ್ದಾರೆ. 

 

ಪ್ರಜಾ ಪ್ರಭುತ್ವದ ಉತ್ಸವವನ್ನು  ಮತ್ತಷ್ಟು ಬಲಪಡಿಸುವಂತೆ  ಅವರು  ಕೋರಿದ್ದಾರೆ.

ಈ ನಡುವೆ   ಬಿಹಾರ ವಿಧಾನಸಭೆ ಚುನಾವಣೆಯ ಪ್ರಚಾರದ ಅಂತಿಮ ಚರಣದಲ್ಲಿಂದು   ಪ್ರಧಾನಿ ಮೋದಿ   ಫೋರಬ್ಸ್ ಗಂಜ್  ಹಾಗೂ  ಸಹಸ್ರಾದಲ್ಲಿ  ಚುನಾವಣಾ  ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.  ಈ  ಚುನಾವಣಾ  ಪ್ರಚಾರ ಸಭೆಗಳ   ಮೂಲಕ  ಪ್ರಧಾನಿ ಮೋದಿ  ಬಿಹಾರದಲ್ಲಿ ತಮ್ಮ   ಚುನಾವಣಾ ಪ್ರಚಾರ ಪ್ರವಾಸವನ್ನು  ಸಂಪನ್ನಗೊಳಿಸಲಿದ್ದಾರೆ.

ಸುದ್ದಿ ಓದಿ