ಮಾರಿಷಸ್ನ ಹೊಸ ಸುಪ್ರೀಂಕೋರ್ಟ್ ಕಟ್ಟಡಕ್ಕೆ ಪ್ರಧಾನಿ ಮೋದಿ, ಪಿಎಂ ಜೌಗನಾಥ್
ನವದೆಹಲಿ, ಜುಲೈ 30: ಮಾರಿಷಸ್ನ ಹೊಸ ಸುಪ್ರೀಂಕೋರ್ಟ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾರಿಷಸ್ ಪ್ರಧಾನಿ ಪ್ರವೀಣ್ ಜೌಗನಾಥ್ ಜಂಟಿಯಾಗಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಎರಡೂ ದೇಶಗಳ ನ್ಯಾಯಾಂಗದ ಹಿರಿಯ ಸದಸ್ಯರ ಉಪಸ್ಥಿತಿಯಲ್ಲಿ ಈ ಕಟ್ಟಡವನ್ನು ಉದ್ಘಾಟಿಸಲಾಯಿತು.
ಈ ಕಟ್ಟಡವನ್ನು ಭಾರತದ ನೆರವಿನಿಂದ ತಯಾರಿಸಲಾಗಿದ್ದು, ಪೋರ್ಟ್ ಲೂಯಿಸ್ ನಗರದಲ್ಲಿ ಇದು ಮೊದಲ ಭಾರತದ ನೆರವಿನಿಂದ ನಿರ್ಮಿಸಿದ ಕಟ್ಟಡವಾಗಿದೆ ಎಂದು ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿತ್ತು.
ಭಾರತೀಯ ಸರ್ಕಾರ 2016ರಲ್ಲಿ ಮಾರಿಷಸ್ ಸರ್ಕಾರಕ್ಕೆ ನೀಡಿದ 353 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ 'ವಿಶೇಷ ಆರ್ಥಿಕ ಪ್ಯಾಕೇಜ್' ಅಡಿಯಲ್ಲಿ ಜಾರಿಯಾಗಿರುವ ಐದು ಯೋಜನೆಗಳಲ್ಲಿ ಇದೂ ಕೂಡ ಒಂದಾಗಿದೆ.
ಈ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಮತ್ತು ಕಡಿಮೆ ದರದಲ್ಲಿ ನಿರ್ಮಿಸಲಾಗಿದೆ.