ಪ್ರಧಾನಿ ಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಸನ್ಮಾನ
ಶಿಗ್ಗಾವಿ 19: ಪ್ರಧಾನಿ ನರೇಂದ್ರ ಮೋದಿಯವರು ಒಂದು ದಿನವೂ ರಜೆ ಹಾಕದೇ ದಿನದಲ್ಲಿ 18 ಘಂಟೆಗಳ ಕಾಲ ಕೆಲಸ ಮಾಡುವ ಮೂಲಕ ದೇಶಕ್ಕಾಗಿ ಮತ್ತು ದೇಶದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದು ಪೌರಕಾರ್ಮಿಕರನ್ನು ಸನ್ಮಾನಿಸಿ ಅವರಿಂದಲೇ ಕೇಕ್ ಕತ್ತರಿಸುವ ಮೂಲಕ ಮೋದಿಯವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಾಲೂಕಾ ನಿಕಟಪೂರ್ವ ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 74 ನೇ ಹುಟ್ಟು ಹಬ್ಬದ ಅಂಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಮೋದಿಯವರಿಗೆ ದೇಶದ ಬಗ್ಗೆ ಇರುವ ಪ್ರಾಮುಖ್ಯತೆ, ಚಿಂತನಾಶೀಲ ಶಕ್ತಿ ಮತ್ತು ದೂರದೃಷ್ಟಿಯ ಆಲೋಚನೆಗಳು ಬೇರೆ ಬೇರೆ ದೇಶದ ಪ್ರಧಾನಿಗಳ ಮಾತುಗಳನ್ನ ನೋಡಿ ತಿಳಿಯಬಹುದಾಗಿದೆ, ಭಾರತವನ್ನ ನಿರ್ಲಕ್ಷ್ಯ ಮಾಡುತ್ತಿದ್ದ ರಾಷ್ಟ್ರಗಳೂ ಸಹಿತ ಇಂದು ಭಾರತಕ್ಕೆ ಪ್ರಾಮುಖ್ಯತೆಯನ್ನ ನೀಡುತ್ತಿವೆ, ಭಾರತ ಕಂಡ ಅತ್ಯಂತ ಸಮರ್ಥ ನಾಯಕರಲ್ಲಿ ಮೋದಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ, ಮೋದಿಯವರಿಗೆ ಇಡಿ ಜಗತ್ತೆ ಶುಭಾಶಗಳನ್ನ ಕೋರಿದೆ ಎಂದರು.
ಭಾಷಣಕಾರ ಹಾಗೂ ಬಿಜೆಪಿ ವಕ್ತಾರ ಕಿರಣ ವಿವೇಕ್ವಂಶಿ ಮಾತನಾಡಿ, ನಿಮ್ಮ ಕನಸು ನಿಮ್ಮನ್ನ ಭಯಪಡಿಸದಿದ್ದರೆ ಅದು ಕನಸೇ ಅಲ್ಲ, ಎಂದು ಮಾರ್ಮಿಕವಾಗಿ ನುಡಿದ ಜಗತ್ತು ಕಂಡ ಶ್ರೇಷ್ಟ ಪ್ರಧಾನಿ ಮೋದಿಯವರಾಗಿದ್ದಾರೆ, ಯೋಗದ ಮಹತ್ವವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಗೊಳಿಸಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮೋದಿಯವರು ಅಂತರಾಷ್ಟ್ರೀಯ ಯೋಗ ದಿನ ಎಂದು ಆಚರಿಸುವಂತೆ ಮಾಡಿದ್ದಾರೆ. ವಿದೇಶಿಗರಿಗೂ ಸಹಿತ ಈಗ ಯೋಗದ ಮಹತ್ವವನ್ನ ಮೋದಿ ಸಾರಿದ್ದಾರೆ ಎಂದರು.
ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಸವಣೂರ ತಾಲೂಕಾ ಬಿಜೆಪಿ ಅದ್ಯಕ್ಷ ಹನುಮಂತಗೌಡ ಮುದಿಗೌರ, ಮುಖಂಡರಾದ ಶಶಿಧರ ಯಲಗಾರ, ಶೋಭಾ ನಿಸ್ಸಿಮಗೌಡ್ರ, ಸುಭಾಸ್ ಚೌಹಾಣ್, ಗಂಗಣ್ಣ ಸಾತಣ್ಣವರ, ಮಂಜುನಾಥ ಬ್ಯಾಹಟ್ಟಿ, ರೇಣುಕನಗೌಡ ಪಾಟೀಲ, ಶಿವಪ್ರಸಾದ ಸುರಗೀಮಠ, ಸೋಮಶೇಖರ ಗೌರಿಮಠ, ಶಿವಾನಂದ ಸೊಬರದ, ದೇವಣ್ಣ ಚಾಕಲಬ್ಬಿ, ನಿಂಗಣ್ಣ ಹರಿಜನ, ಪ್ರತೀಕ ಕೋಳೆಕಾರ, ಮಲ್ಲಿಕಾರ್ಜುನ ಹಡಪದ, ಉಷಾ ಬಿಳೆಕುದುರಿ, ಸಂಜನಾ ರಾಯ್ಕರ್, ಲಕ್ಷ್ಮಿ ಮುಂದಿನಮನಿ, ರತ್ನಕ್ಕ ಬನ್ನಿಕೊಪ್ಪ, ನೀಲವ್ವ ಕಾಲವಾಡ, ನವೀನ ಸಾಸನೂರ, ವಿಶ್ವನಾಥ ಗಾಣಗೇರ, ಸಚಿನ ಮಡಿವಾಳರ, ಮಂಜುನಾಥ ಮಿರ್ಜಿ, ರವಿ ಬಿಸೆಟ್ಟಿ, ಹನುಮಂತ ಗುಳೇದ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.