ರಾಷ್ಟ್ರೀಯ

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಇಂದು ಶಿಲಾನ್ಯಾಸ

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ  ಇಂದು ಶಿಲಾನ್ಯಾಸ

ನವದೆಹಲಿ, ಡಿ 10:ರಾಷ್ಟ್ರ ರಾಜಧಾನಿ ದೆಹಲಿಯ  ಸಂಸತ್  ಮಾರ್ಗದಲ್ಲಿ  ಹೊಸ ಸಂಸತ್  ಭವನ ನಿರ್ಮಾಣಕ್ಕೆ  ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿ ಪೂಜೆ  ನೆರವೇರಿಸಲಿದ್ದಾರೆ.   ಅಪರಾಹ್ನ  ಒಂದು ಗಂಟೆಗೆ   ಹೊಸ ಸಂಸತ್ ಭವನ  ನಿರ್ಮಾಣದ  ಅಡಿಗಲ್ಲು ಇರಿಸಲಿದ್ದಾರೆ.  ಈ  ಸಂಬಂಧ  ಅಧಿಕಾರಿಗಳು ಎಲ್ಲ ವ್ಯವಸ್ಥೆ  ಪೂರ್ಣಗೊಳಿಸಿದ್ದಾರೆ.  ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ವೆಂಕಟೇಶ್ ಜೋಶಿ ಹಾಗೂ  ರಾಜ್ಯಸಭೆ ಉಪ ಸಭಾಪತಿ  ಹರಿವಂಶ್  ನಾರಾಯಣ್ ಸಿಂಗ್  ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಒಟ್ಟು 200  ಮಂದಿ  ಅತಿಥಿಗಳು   ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

75 ನೇ ಸ್ವಾತಂತ್ರ್ಯ ದಿನಾಚರಣೆ ನಡೆಯುವ   ಆಗಸ್ಟ್ 15, 2022  ವೇಳೆಗೆ  ವೇಳೆಗೆ  ಸಂಸತ್ ಭವನ ನಿರ್ಮಾಣ ಪೂರ್ಣಗೊಳಿಸಬೇಕು ಎಂದು ಸರ್ಕಾರ   ಭಾವಿಸಿದೆ. ನಾಲ್ಕು ಅಂತಸ್ತಿನ ಸಂಸತ್ ಭವನವನ್ನು ರೂ .971 ಕೋಟಿ ವೆಚ್ಚದಲ್ಲಿ 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.ಪರಿಸರ ಸ್ನೇಹಿ  ವಿಧಾನಗಳಿಗೆ ಆದ್ಯತೆ ನೀಡಲಿದ್ದು, ಭೂಕಂಪನಗಳನ್ನು  ತಡೆದುಕೊಳ್ಳುವಂತಹ  ಹೊಸ ತಂತ್ರಜ್ಞಾನವನ್ನು  ಬಳಸಲಾಗುತ್ತದೆ.

ಸಂಸತ್ ಭವನದಲ್ಲಿರುವ  ಲೋಕಸಭೆ  ಹಾಗೂ  ರಾಜ್ಯಸಭೆಗಳಿಗಿಂತ ಇದು ದೊಡ್ಡದಾಗಿದೆ. ಭವಿಷ್ಯದ ಅಗತ್ಯಗಳಿಗಾಗಿ  ವಿಸ್ತಿರ್ಣ  ಪ್ರದೇಶವನ್ನು ಹೆಚ್ಚು  ವಿಸ್ತರಿಸಲಾಗಿದೆ. ಈ  ಭವನದಲ್ಲಿ  ಲೋಕಸಭೆಯ 888 ಸದಸ್ಯರು, 384 ಮಂದಿ ರಾಜ್ಯಸಭಾ ಸದಸ್ಯರು ಕುಳಿತುಕೊಳ್ಳಬಹುದಾಗಿದೆ.ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವಂತೆ ಒಳಾಂಗಣ ಅನಾವರಣಗೊಳ್ಳಲಿದೆ. ಸೆಂಟ್ರಲ್ ಕಾನ್ಸ್ಟಿಟ್ಯೂಷನ್  ಗ್ಯಾಲರಿಯನ್ನು ಜನಸಾಮಾನ್ಯರು ಸಂದರ್ಶಿಸಬಹುದಾಗಿದೆ.

ಸುದ್ದಿ ಓದಿ