ಮಿಲಾದ್ –ಉನ್ –ನಬಿ ಶುಭ ಕೋರಿದ ಪ್ರಧಾನಿ
ನವದೆಹಲಿ, ಅ 30 :ಮಿಲಾದ್ -ಉನ್-ನಬಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜನತೆಗೆ ಶುಭ ಕೋರಿದ್ದಾರೆ.ಈ ಸಂದರ್ಭದಲ್ಲಿ ಜನರಿಗೆ ಸಂದೇಶ ನೀಡಿರುವ ಪ್ರಧಾನಿ, “ಮಿಲಾದ್ -ಉನ್-ನಬಿಗೆ ಶುಭಾಶಯಗಳು. ಈ ದಿನವು ಸಹಾನುಭೂತಿ ಮತ್ತು ಸಹೋದರತ್ವವನ್ನು ಹೆಚ್ಚಿಸುತ್ತದೆ ಎಂದು ಭಾವಿಸುತ್ತೇವೆ. ಎಲ್ಲರೂ ಆರೋಗ್ಯವಾಗಿ ಮತ್ತು ಸಂತೋಷವಾಗಿರಲಿ. ಈದ್ ಮುಬಾರಕ್!'' ಎಂದು ತಿಳಿಸಿದ್ದಾರೆ.