ರಾಷ್ಟ್ರೀಯ

ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ: ಪ್ರಧಾನಿ

ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ: ಪ್ರಧಾನಿ

ನವದೆಹಲಿ, ಅ 19 : ಶಿಕ್ಷಣವೇ ಪ್ರತಿಯೊಬ್ಬರ ಬಾಳಿನ ಬೆಳಕು, ರಾಷ್ಟ್ರ  ನಿರ್ಮಾಣ ಕಾರ್ಯದಲ್ಲಿ  ವಿದ್ಯಾರ್ಥಿಗಳ ಪಾತ್ರ, ಜವಾಬ್ದಾರಿ ಬಹಳ ಮಹತ್ವದ್ದು   ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಸೋಮವಾರ ವರ್ಚುವಲ್ ವೇದಿಕೆಯ ಮೂಲಕ ಮೈಸೂರು ವಿಶ್ವವಿದ್ಯಾಲಯದ 100 ನೇ ಘಟಿಕೋತ್ಸವದಲ್ಲಿ   ಭಾಷಣ ಮಾಡಿ, ನಂತರ ಅವರು ನಾಡಿನ ಜನತೆಗೆ ದಸರಾ  ಶುಭಾಶಯ ಕೋರಿದರು.  ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬ ಹೃದಯಪೂರ್ವಕ ಶುಭಾಷಯಗಳು. ಕೆಲವೊಂದು ಛಾಯಚಿತ್ರಗಳನ್ನು ಗಮನಿಸಿದೆ  ಕೋವಿಡ್ 19 ಗೆ ಸಂಬಂಧಿಸಿದ ನಿರ್ಬಂಧಗಳಿದ್ದರೂ  ಸಂಭ್ರಮ-  ಉತ್ಸಾಹಕ್ಕೆ ಕೊರತೆ ಇಲ್ಲ ಎಂದರು.

ಪದವಿ ಜೊತೆಗೆ ರಾಷ್ಟ್ರ  ನಿರ್ಮಾಣದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯನ್ನು ಕೊಂಡಾಡಿದರು. ಗೊರೊರು ರಾಮಸ್ವಾಮಿ ಅಯ್ಯಂಗಾರ್ ಅವರ ಶಿಕ್ಷಣವೇ ಬೆಳಕು ಉಕ್ತಿಯನ್ನು ಕನ್ನಡದಲ್ಲೇ ಉಲ್ಲೇಖಿಸಿದ ಅವರು,  ಶಿಕ್ಷಣದ ಗುರಿ, ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಧಾನಿ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ರಾಜ್ಯಪಾಲ  ವಜುಬಾಯಿ ವಾಲ,   ಉನ್ನತ  ಶಿಕ್ಷಣ ಸಚಿವ ಅಶ್ವತ್ಥದ ನಾರಾಯಣ ಮೊದಲಾದವರು ಭಾಗಿಯಾಗಿದ್ದರು. 

 



ಸುದ್ದಿ ಓದಿ