ಬೈಲಹೊಂಗಲ

‘ಪರಮಾತ್ಮನ ದೃಷ್ಠಿಯಲ್ಲಿ ಮನುಷ್ಯ ಅಶ್ಟೆ ಶ್ರೇಷವಲ್ಲ್

‘ಪರಮಾತ್ಮನ ದೃಷ್ಠಿಯಲ್ಲಿ ಮನುಷ್ಯ  ಅಶ್ಟೆ  ಶ್ರೇಷವಲ್ಲ್

ಬೈಲಹೊಂಗಲ 17: ಪರಮಾತ್ಮನ ದೃಷ್ಠಿಯಲ್ಲಿ  ಇರುವಂತ 84ಲಕ್ಷ ಜೀವ ರಾಶಿಯು ಪರಮಾತ್ಮನ ದೃಷ್ಠಿಯಲ್ಲಿ ಸಮಾನವೇ ಎಂದು ಉಜ್ಜಯನಿ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಅವರು ಪಟ್ಟಣದ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ನಡೆದ ಶ್ರೀಮಾತಾ ಸಂಭ್ರಮ 2021ರ ‘ಶಾಂಭವಿಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿ, ‘ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಬದುಕುವ, ಜೀವಿಸುವ ಹಕ್ಕಿದೆ. ಹಾಗಾಗಿ ಆಯಾಯ ವ್ಯಕ್ತಿಯ ಬದುಕನ್ನು ಗುರುತಿಸಬೇಕು. ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದರ ಜೊತೆಗೆ ತಾನು ಬದುಕಿ ಮತ್ತೊಬ್ಬರ ಬದುಕಿಗೆ ದಾರಿ ದೀಪವಾಗಬೇಕು. ಈ ಮಾರ್ಗವನ್ನು ಡಾ. ಮಹಾಂತ ಶಾಸ್ತ್ರೀಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯವಾಗಿದೆ' ಎಂದರು.

ಡಾ. ಮಹಾಂತಶಾಸ್ತ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಟಕೋಳ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ, ಅರಳಿಕಟ್ಟಿ ಶಿವಮೂರ್ತಿ ದೇವರು, ಕುಂದರಗಿ ಅಮರಸಿದ್ದೇಶ್ವರ ಸ್ವಾಮೀಜಿ,  ಕಮತಾನಟ್ಟಿ ಗುರುದೇವರು, ಘಟಪ್ರಭಾದ ವಿರುಪಾಕ್ಷ ದೇವರು, ಮಹಾಲಿಂಗಪುರದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.ಹಿರಿಯ ನಟ ದೊಡ್ಡಣ್ಣ ಶ್ರೀಮಾತಾ ಸಂಭ್ರಮದ 2021ನೇ ಶಾಂಭವಿಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಮಕ್ಕಳು ಹೆಚ್ಚು ಅಧ್ಯಯನ ಮಾಡುವುದರಿಂದ ಜ್ಞಾನರ್ಜನೆ ಸಂಪತ್ತು ಬೆಳೆಯಲಿದ್ದು, ಸಾಧು ಸಂತರ ಅಮೃತವಾಣಿಗಳನ್ನು ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗುವಂತಾಗಬೇಕು ಎಂದರು. ಗಾಯಕ ಕಾಶೀಮ್, ಗಾಯಕಿ ಮಹನ್ಯಾ ಹಾಡು ಕೇಳುಗರ ಮನ ತನಿಸಿತು. ದಯಾನಂದ ಬಿಳಗಿ ತಂಡದವರಿಂದ ನಡೆದ ಕುಂಟಕೋಣ, ಮೂಕ ಜಾಣ ನಾಟಕ ಎಲ್ಲರನ್ನು ರಂಜಿಸಿತು. ಹಿರಿಯ ನಟ ದೊಡ್ಡಣ್ಣ ಅವರಿಗೆ 2021ರ ಶಾಂಭವಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಪಂ.ಸದಸ್ಯ ರೋಹಿಣಿ ಪಾಟೀಲ, ಶಂಕರ ಮಾಡಲಗಿ, ಮಹಾಂತೇಶ ತುರಮರಿ, ಪ್ರಮೋದಕುಮಾರ ವಕ್ಕುಂದಮಠ, ಮಡಿವಾಳಪ್ಪ ಹೋಟಿ, ಬಿ.ಬಿ.ಗಣಾಚಾರಿ, ಮಹಾಂತೇಶ ಹೊಸಮನಿ, ಬಸವರಾಜ ಸಾಲಿಮಠ, ರಫೀಕ ಬಡೇಘರ, ಶಿವಾನಂದ ಕುಡಸೋಮಣ್ಣವರ,  ಅನೇಕರು ವೇದಿಕೆಯಲ್ಲಿ ಇದ್ದರು. ಮುತ್ತುರಾಜ ಮತ್ತಿಕೊಪ್ಪ ನಿರೂಪಿಸಿದರು. ಶೈಲಾ ಕೊಕ್ಕರಿ ಸ್ವಾಗತಿಸಿದರು. ಸಂತೋμÀ ಹುಣಶೀಕಟ್ಟಿ ವಂದಿಸಿದರು. ಭಕ್ತರು, ಜಾತ್ರಾ ಕಮೀಟಿಯವರು ಜಾತ್ರೆ ಯಶಸ್ವಿಗೆ ಶ್ರಮಿಸಿದರು.

ಸುದ್ದಿ ಓದಿ