ರಾಣೆಬೆನ್ನೂರ

ಎನ್‌ಎಸ್‌ಎಸ್‌ನಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

ಎನ್‌ಎಸ್‌ಎಸ್‌ನಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

ರಾಣೇಬೆನ್ನೂರು 17:  ಸ್ಥಳೀಯ ರಾ. ತಾ. ಶಿ. ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ರಾಣೇಬೆನ್ನೂರು, ಕರ್ನಾಟಕ ಸರ್ಕಾರ ರಾಷ್ಟ್ರೀಯ ಸೇವಾ ಯೋಜನಾ ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ಆಕ್ಸಿಜನ್ ಚಾಲೆಂಜ್ ಅಭಿಯಾನವನ್ನು ರಾ.ತಾ.ಶಿ.ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಸುಭಾಷ್‌.ವ್ಹಿ.ಸಾವುಕಾರ ಸಿಡ್ಸ್‌ ಬಾಲ್ ನೆಡುವುದರ ಮೂಲಕ ಉದ್ಘಾಟಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಎಫ್‌.ಎಚ್‌.ಮಾಚೇನಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸ್ಟೂಡೆಂಟ್ ಫಾರ್ ಡೆವಲಪಮೆಂಟ್ ಸಂಸ್ಥೆಯ ಸಂಚಾಲಕರಾದ ಪ್ರಕಾಶ ಕೊಳೂರ ಇವರ ಸಹ ಭಾಗಿತ್ವದಲ್ಲಿ ಆಕ್ಸಿಜನ್ ಚಾಲೆಂಜ್ 5 ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಈಗಾಗಲೇ ಯಶಸ್ವಿಯಾಗಿ ಮಾಡಿರುತ್ತಾರೆ. ಇದರ ಮುಂದುವರೆದ ಭಾಗವಾಗಿ ಕರ್ನಾಟಕ ರಾಜ್ಯದ್ಯಂತ ದಿನಾಂಕ: ಜೂನ್ 17 ಜೂನ್ 18 - 2021 ಈ ಎರಡು ದಿನ ಆಕ್ಸಿಜನ್ ಚಾಲೆಂಜ್ ಅಭಿಯಾನದ ಮೂಲಕ 5 ಲಕ್ಷ ಸೀಡ್ ಬಾಲ್‌ಗಳನ್ನು ಬಿತ್ತನೆ ಮಾಡುವ ಯೋಜನೆಯನ್ನು ಹೊಂದಿದ್ದು ಈ ಮಹತ್ವದ ಯೋಜನೆಯಲ್ಲಿ ರಾಜ್ಯ ಎನ್‌.ಎಸ್‌.ಎಸ್ ಕೋಶದ ಎಲ್ಲ ವಿದ್ಯಾರ್ಥಿಗಳ ಸಹಕಾರದಿಂದ ನೇರವೆರಿಸಲಾಗಿದೆ 1 ಸಾವಿರ ಸೀಡ್ ಬಾಲ್‌ಗಳನ್ನು ನೇಡುವುದರ ಮೂಲಕ ಐ.ಕ್ಯೂ.ಎಸ್‌.ಸಿ ಸಂಯೋಜಕರಾದ ಡಾ.ಮಧುಕುಮಾರ.ಆರ್ ಸಿ.ಎ.ಹರಿಹರ ಎನ್‌.ಎಸ್‌.ಎಸ್‌. ಕಾರ್ಯಕ್ರಮಾಧಿಕಾರಿಯಾದ ಡಾ.ಸರಸ್ವತಿ.ಎಚ್‌.ಬಮ್ಮನಾಳ ಅಜಯಕುಮಾರ, ಶರತ್, ಶರಣ ರಾಮಚಂದ್ರ, ಯಶವಂತ, ಚೇತನ್  ಎನ್‌.ಎಸ್‌.ಎಸ್‌. ಸ್ವಯಂ ಸೇವಕ ಸೇವಕಿಯರು ಕಾಲೇಜಿನ ಸಿಬ್ಬಂದಿ ವರ್ಗ ಬೊಧಕ ಬೋಧಕೇತರ ವರ್ಗದವರು ಪಾಲ್ಗೊಂಡು ಈ ಒಂದು ಅಭಿಯಾನ ಯಶಸ್ವಿಗೊಳಿಸುವಲ್ಲಿ ಸಹಾಯಕಾರಿಯಾದರು. 


ಸುದ್ದಿ ಓದಿ