ದೇಶದಲ್ಲಿ ಒಂದೇ ದಿನ 78,000 ಕೊವಿಡ್ ಪ್ರಕರಣಗಳು ವರದಿ: ಚೇತರಿಕೆ ಪ್ರಮಾಣ ಶೇ 76.61ಕ್ಕೆ ಏರಿಕೆ
ನವದೆಹಲಿ,
ಆಗಸ್ಟ್ 30 : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 78,760 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು,
ಇದೇ ಅವಧಿಯಲ್ಲಿ 64,935 ಜನರು ವೈರಸ್ನಿಂದ ಗುಣಮುಖರಾಗುವುದರೊಂದಿಗೆ ಚೇತರಿಕೆ ಪ್ರಮಾಣ ಶೇ
76.61 ರಷ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ನವೀಕೃತ ಮಾಹಿತಿಯಂತೆ, ದೇಶದಲ್ಲಿ ಒಟ್ಟು ಕೊವಿಡ್-19 ಪ್ರಕರಣಗಳ ಸಂಖ್ಯೆ 35,42,733 ರಷ್ಟಿದ್ದರೆ, ಇದುವರೆಗೆ ಚೇತರಿಸಿಕೊಂಡವರ ಸಂಖ್ಯೆ 27,13,933 ಕ್ಕೆ ತಲುಪಿದೆ.
ಸದ್ಯ, ದೇಶದಲ್ಲಿ 7,65,302 ಸೋಂಕಿನ ಸಕ್ರಿಯ ಪ್ರಕರಣಗಳಿವೆ. ಆಶಾದಾಯಕ ಬೆಳವಣಿಗೆಯಲ್ಲಿ ದೇಶಾದ್ಯಂತ ಚೇತರಿಕೆಯಾದವರ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತ 19,48,631 ರಷ್ಟು ಅಧಿಕವಾಗಿದೆ.
ಕಳೆದ 24 ತಾಸಿನಲ್ಲಿ 948 ಸಾವುಗಳು ವರದಿಯಾಗುವುದರೊಂದಿಗೆ ಸಾವಿನ ಸಂಖ್ಯೆ 63,498 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಪ್ರಕಾರ ಕಳೆದ 24 ಗಂಟೆಗಳಲ್ಲಿ
10,55,027 ಪರೀಕ್ಷೆಗಳನ್ನು ನಡೆಸಲಾಗಿದ್ದು, ಸದ್ಯ ಈ ಸಂಖ್ಯೆ ಒಟ್ಟು 4,14,61,636 ಕ್ಕೆ ತಲುಪಿದೆ. ಯುಎನ್ಐ ಎಸ್ಎಲ್ಎಸ್