ಚಿಕ್ಕೋಡಿ

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ: ಐಹೊಳೆ

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ: ಐಹೊಳೆ

ಚಿಕ್ಕೋಡಿ 09: ಸರ್ಕಾರದ ಅನುದಾನ ಸಮರ​‍್ಕವಾಗಿ ಖರ್ಚು ಮಾಡಿ ಅಭಿವೃದ್ಧಿ ಮಾಡಿರುವುದರಿಂದ ಕ್ಷೇತ್ರದ ಜನ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ನಾನು ಸಹ ಕ್ಷೇತ್ರದ ಮನೆ ಮಗನಾಗಿ ಜನರ ಸೇವೆ ಮಾಡುತ್ತಿದ್ದೇನೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. 

ಮಂಗಳವಾರ ರಾಯಬಾಗ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ ಮಮದಾಪೂರ, ಪೋಗತ್ಯಾನಟ್ಟಿ, ವಿಜಯನಗರ, ನಾಗರಮುನ್ನೋಳ್ಳಿ ಹಾಗೂ ಉಮರಾಣಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು. 

ರಾಯಬಾಗ ಕ್ಷೇತ್ರ ವ್ಯಾಪ್ತಿಯ ಚಿಕ್ಕೋಡಿ ತಾಲೂಕಿನ  2.40 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆ. ಇದರಲ್ಲಿ ಗ್ರಾಮೀಣ ರಸ್ತೆ ಮತ್ತು ಮೂಲಭೂತ ಸೌಕರ್ಯ ಒದಗಿಸುವುದು, ಕ್ಷೇತ್ರದ ಮನೆ ಮಗನಾಗಿ ಸೇವೆ ಮಾಡುತ್ತೇನೆ ಎಂದರು. 

ಚಿಕ್ಕೋಡಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ 50 ಲಕ್ಷ ರೂ., ಪೋಗತ್ಯಾನಟ್ಟಿ ಸಿಸಿ ರಸ್ತೆ ಕಾಮಗಾರಿಗೆ 50 ಲಕ್ಷ ರೂ., ವಿಜಯನಗರ ಸಿಸಿ ರಸ್ತೆಗೆ 50 ಲಕ್ಷ ರೂ., ನಾಗರಮುನ್ನೋಳ್ಳಿ ಗ್ರಾಮದಲ್ಲಿ ಬಸಗೌಡ ತೋಟದಿಂದ ಎನ್‌ಎಂ ರಸ್ತೆಯವರೆಗೆ ರಸ್ತೆ ನಿರ್ಮಾಣಕ್ಕೆ 50 ಲಕ್ಷ ರೂ. ಹಾಗೂ ಉಮರಾಣಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು. 

ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ ಮಾತನಾಡಿ ಶಾಸಕ ದುರ್ಯೋಧನ ಐಹೊಳೆ ಅವರು ಕಳೆದ 17 ವರ್ಷದಿಂದ ಕ್ಷೇತ್ರದ ಜನರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡಿ ಜನಮಾನ್ಯತೆ ಗಳಿಸಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಉಮರಾಣಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಪೂಜೇರಿ, ತಮ್ಮಣ್ಣಾ ಗಾಡಿವಡ್ಡರ, ಸುರೇಶ ಬೆಲ್ಲದ, ಮಹಾಂತೇಶ ಶಿರಗೂರ, ಮಹಾಂತೇಶ ಪಾಟೀಲ, ಸಿದ್ದು ಖಿಂಡಿ, ಸದಾಶಿವ ಘೋರೆ​‍್ಡ, ರಾಜು ಕುಂಬಾರ, ವಿರೂಪಾಕ್ಷ ಈಟಿ, ಎಂ.ಎಸ್‌.ಈಟಿ, ಅರುಣ ಮರ್ಯಾಯಿ, ಗುಲಾಬ ಜಮಾದಾರ, ಡಿ.ಆರ್‌.ಕೋಟ್ಯಾಪಗೋಳ, ಎಸ್‌.ಎಸ್‌.ಹೊಸಮನಿ, ಲಾಡಜಿ ಮುಲ್ತಾನಿ, ಎಂ.ಬಿ.ಆಲೂರೆ, ನಿಜಾಮ ಪೆಂಡಾರೆ, ಮನೋಜ ಮನಗೂಳಿ, ಪ್ರಕಾಶ ಮನಗೂಳಿ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಲಕ್ಷ್ಮಣ ಪೂಜೇರಿ, ಮುರಿಗೇಪ್ಪ ಅಡಿಸೇರಿ, ಮಹಾಂತೇಶ ಯಶವಂತಗೋಳ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ