ರಾಣೆಬೆನ್ನೂರ

ಸಂಕಷ್ಟದಲ್ಲಿ ಕೈಲಾದ ಸಹಾಯ ಮಾಡುವುದೇ ನಮ್ಮ ಕರ್ತವ್ಯ: ಅರುಣಕುಮಾರ

ಸಂಕಷ್ಟದಲ್ಲಿ ಕೈಲಾದ ಸಹಾಯ ಮಾಡುವುದೇ ನಮ್ಮ ಕರ್ತವ್ಯ: ಅರುಣಕುಮಾರ

ರಾಣೀಬೆನ್ನೂರ 05: ಸಮಾಜದಲ್ಲಿ ಕಳೆದ 2 ವರ್ಷದಿಂದ ಮಹಾಮಾರಿ ಹಾವಳಿಯಿಂದಾಗಿ ಶ್ರೀಮಂತರು ಸೇರಿದಂತೆ ಸಾಮಾನ್ಯ ಜನರೂ ಸಹ ಅನೇಕ ರೀತಿಯಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಇಂತಹ ಸಂದರ್ಭದಲ್ಲಿ ಇದ್ದವರು ಇಲ್ಲದವರಿಗೆ ಸಹಾಯ ಹಸ್ತ ನೀಡುವುದರ ಮೂಲಕ ಅವರ ಕನಿಷ್ಠ ಬದುಕು ಸಾಗಿಸಲು ಸಹಕಾರಿಯಾಗಬೇಕಾದ ಅಗತ್ಯವಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ಇಲ್ಲಿನ ರೇನ್‌ಬೋ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಆನ್‌ಲೈನ್ ಶಿಕ್ಷಣ ಪ್ರಾರಂಭೋತ್ಸವ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಧವಸ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿದರು. ಬದಲಾದ ವಾತಾವರಣಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ನೀಡುವುದು ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳು ಸಹ ಈ ವ್ಯವಸ್ಥೆಗೆ ಹೊಂದಿಕೊಳ್ಳಬೇಕಾಗುತ್ತದೆ. ಎಂದ ಅವರು ನಗರದಲ್ಲಿ ಇಂತಹ ಶಿಕ್ಷಣ ಸಂಸ್ಥೆ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ವರ್ತಕ ಬಸವರಾಜ ಪಾಟೀಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬಸವರಾಜ ಹುಲ್ಲತ್ತಿ, ಜಯಣ್ಣ ಮುಚಡಿ, ಡಾ.ಸುರೇಶ್ ಸಿ.ಟಿ. ಲಲಿತಾ ಸುರೇಶ್ ಮಾಲತೇಶ್ ಐ.ಕೆ, ವೀರಣ್ಣ ಸಿ. ಟಿ, ಶಾರದಾ ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು. ಸೈಮನ್ ಡಿ. ಸ್ವಾಗತಿಸಿ, ಅಕ್ಷಯ್ ಬಿ.ಎನ್‌. ನಿರೂಪಿಸಿದರು.  ಪ್ರಾಂಶುಪಾಲ ಸಂಗಮೇಶ್ ಎಸ್‌.ಎಂ. ವಂದಿಸಿದರು. 


ಸುದ್ದಿ ಓದಿ