ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪ್ರೇರಕ
ಕುಷ್ಟಗಿ 10: ಸಂಘಟನೆಗಳು ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುವುದರ ಜೊತೆಗೆ ಸಮಾಜದಲ್ಲಿರುವ ಸಾಧಕರನ ಗುರುತಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಗುರ್ಪ ಕುರಿ ಹೇಳಿದರು.
ರಾಯಚೂರಿನ ಹೆಣ್ಣು ಜಗದ ಕಣ್ಣು ಸಂಘಟನೆ, ಹೂವಿನ ಹಡಗಲಿಯ ಕೆ.ಎಂ ತಾಂಡಾದ ಗ್ಲೋಬಲ್ ಬಂಜಾರ ಆರ್ಗನೈಸರ್ ವತಿಯಿಂದ ರವಿವಾರ ಬೆಳಿಗ್ಗೆ ಇಲ್ಲಿನ ಪಿ.ಎಸ್.ಎಚ್ ಪ್ಯಾಲೇಸ್ನಲ್ಲಿ ಏರಿ್ಡಸಿದ್ದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ 2023 ಪುಸ್ತಕ ಬಿಡುಗಡೆ ಮತ್ತು ಸಾಧಕರಿಗೆ ಕಲ್ಯಾಣ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಶೇಖರಗೌಡ ಸರನಾಡಗೌಡರ ಕಾಂಚನಗಂಗಾ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುತ್ತಿರುವುದು ಮಾದರಿಯ ಕಾರ್ಯವಾಗಿದೆ ಈ ಕಾರ್ಯದಿಂದ ಸಾಧಕರು ಮತ್ತಷ್ಟು ಪ್ರೇರಣೆಗೊಂಡು ಸುಸ್ಥಿರ ಮತ್ತು ಆರೋಗ್ಯಭರಿತ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸಲು ಅವರಿಗೆ ಪುಷ್ಟಿ ನೀಡುತ್ತದೆ ಆ ಕಾರಣದಿಂದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯು ಹಮ್ಮಿಕೊಂಡ ಈ ಕಾರ್ಯಕ್ರಮವು ಮಾದರಿಯವಾಗಿದೆ ಎಂದು ಹೇಳಿದರು.
ಡಾ.ಜೀವನ ಸಾಬ್ ಬಿನ್ನಾಳ ವಿಶೇಷ ಉಪನ್ಯಾಸ ನೀಡಿ ಸಾಮಾಜಿಕ ವ್ಯಾಧಿಗಳಿಗೆ ಸಾಹಿತ್ಯ ಮುಲಾಮ್ ಆಗಲಿ ಕಲೆ ಮತ್ತು ಸಾಹಿತ್ಯವು ಆಯಾ ಕಾಲದ ಪ್ರತಿಭಟನಾತ್ಮಕ ಮಾಧ್ಯಮವಾಗಿ ಹೊರಹೊಮ್ಮಿದೆ, ಅದು ಯಾವಾಗಲೂ ಪ್ರಸಕ್ತ ಕಾಲದ ಕೈಗನ್ನಡಿಯಂತಿರುತ್ತದೆ, ಬಡವರ, ಶೋಷಿತರ, ಅನ್ಯಾಯ ಕೊಳಗಾದವರ ಧ್ವನಿಯಾಗಿ ಸಾಹಿತ್ಯವು ಹೊರಹೊಮ್ಮಿದಾಗ ಮಾತ್ರ ಸಮಷ್ಠಿಪ್ರಜ್ಞೆಯನ್ನು ಬೆಳೆಸಲು ಸಾಧ್ಯವಿದೆ, ಕನ್ನಡ ಸಾಹಿತ್ಯವು ಜಗತ್ತಿನ ಸಾಹಿತ್ಯವನ್ನ ಪರಿಭಾವಿಸುವಷ್ಟು ಶಕ್ತಿಯುತವಾಗಿದೆ, ಅನ್ಯ ಭಾಷೆಯ ಸಾಹಿತ್ಯದಿಂದ ಪ್ರೇರಣೆಯನ್ನು ಪಡೆದಿದೆ, ಜನವಾಣಿ ಬೇರು ಕವಿವಾಣಿ ಹೂವು ಎಂಬಂತೆ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಜನಪದ ಮೂಲ ಆಕಾರವಾಗಿದೆ, ಸಮಾಜದ ಒಳಿತನ್ನು ಬಯಸುವ ಸುಸಂಸ್ಕೃತ ನಾಗರೀಕರನ್ನು ಸೃಷ್ಟಿಸುವಲ್ಲಿ ಸಾಹಿತ್ಯ ಮತ್ತು ಕಲೆಯು ಪ್ರಮುಖವಾದ ಪಾತ್ರವನ್ನು ನಿರ್ವಹಿಸುವುದರಲ್ಲಿ ಎರಡು ಮಾತಿಲ್ಲ. ಸಾಹಿತ್ಯ ಮತ್ತು ಕಲೆಯು ಮನುಷ್ಯನನ್ನು ಮತ್ತಷ್ಟು ಮಾನವೀಯತೆ ನೆಲೆಗಟ್ಟಿನಲ್ಲಿ ವಿಕಸನಗೊಳ್ಳಲು ಸಾಧ್ಯವಾಗಿಸುತ್ತದೆ. ಓದುಗ ವರ್ಗ ಕ್ಷೀಣಿಸುತ್ತಿರುವುದು ಈ ಕಾಲದ ಸಾಹಿತ್ಯ ಲೋಕದ ಅಪಾಯವೇ ಸರಿ, ಕನ್ನಡ ಭಾಷೆ ಮತ್ತಷ್ಟು ಗಟ್ಟಿಗೊಳ್ಳಲು ಜನಪದ ಸಾಹಿತ್ಯವನ್ನು ಮತ್ತು ಕಲಾ ಪ್ರಕಾರಗಳನ್ನು ವ್ಯಾಪಕವಾಗಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದಿ ಎಂದು ಹೇಳಿದರು.
ಪುರಸಭಾ ಸದಸ್ಯ ವಸಂತ ಮೇಲಿನಮನಿ ಮಾತನಾಡಿ ಸಮಾಜದ ನೋವು ನಲಿವು ಬಡವರ ಅಸಹಾಯಕತೆಗೆ ಸಾಹಿತ್ಯ ಪರಿಹಾರವಾಗಬಲ್ಲದು ಸಾಹಿತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದರೆ ಸೃಜನಶೀಲ ಮನಸ್ಸುಗಳು ಸೃಷ್ಟಿಸಲು ಸಹಾಯಕವಾಗುತ್ತದೆ, ಸಮ್ಮೇಳನದ ಅಧ್ಯಕ್ಷ ಶೇಖರಗೌಡ ಸರನಾಡಗೌಡ್ರ ಮಾತನಾಡಿ ಕವಿ ಕಲಾವಿದರು ಸಾಹಿತಿಗಳು ಈ ನಾಡಿನ ಆಸ್ತಿ ಇದ್ದಂತೆ, ಅವರನ್ನ ಸದ್ಬಳಿಕೆ ಮಾಡಿಕೊಳ್ಳುವ ಮೂಲಕ ಸೂಸ್ಥಿರ ಸಮಾಜವನ್ನು ನಿರ್ಮಿಸುವಲ್ಲಿ ಸಮಾಜದ ಪ್ರತಿಯೊಬ್ಬರು ಪಾತ್ರ ಹಿರಿಯದು ಎಂದರು, ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಹಿಮ್ಮಡಿಯಾಗಬೇಕು ಎಂಬ ಆಶಯ ಅಭಿವ್ಯಕ್ತಿಸಿದರು. ಯಲ್ಲಮ್ಮ ಜಿ ಪಾಟೀಲ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಹ್ಮದ್ ಹುಸೇನ್, ಡಾ ಮಹೇಂದ್ರ ಕುರುಡಿ, ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಅಮರೇಗೌಡ ನಾಗೂರ, ನಿಂಗಪ್ಪ ಗುನ್ನಾಳ, ಮುಖ್ಯಶಿಕ್ಷಕ ಎಚ್.ಎಚ್ ಉಸ್ತಾದ್, ಚಂದ್ರಕಲಾ ಎಂ ಇಟಗಿಮಠ್, ವಿದ್ಯಾ ಕಂಪಾಪೂರ ಮಠ, ಪುಷ್ಪ ಬಿ ಎಸ್, ಗೋಪಾಲ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ಮತ್ತು ಗ್ಲೋಬಲ್ ಬಂಜಾರ್ ಆರ್ಗನೈಜೇಷನ್ ನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 48 ಸಾಧಕರಿಗೆ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸಿದರು. ಶಿಕ್ಷಕಿ ವೈಶಾಲಿ ನಾಯಕ್ ನಿರೂಪಿಸಿ, ವಂದಿಸಿದರು.