ಬೆಳಗಾವಿ

ದೇವಸ್ಥಾನಗಳಲ್ಲಿ ಶರಣರ ಅನುಭವ ಗೋಷ್ಠಿ ಆಯೋಜನೆ

ದೇವಸ್ಥಾನಗಳಲ್ಲಿ ಶರಣರ ಅನುಭವ ಗೋಷ್ಠಿ ಆಯೋಜನೆ


ಪಾಲಬಾವಿ   21:  : ದೇವಸ್ಥಾನಗಳು ನಮ್ಮ ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾಗಿದ್ದು, ಅವುಗಳಲ್ಲಿ ನಿತ್ಯ ಭಜನೆ, ಕೀರ್ತನೆ, ಸತ್ಸಂಗ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.  

ಹಂದಿಗುಂದ ಗ್ರಾಮದ ಭದ್ರಶೆಟ್ಟಿಯವರ ತೋಟದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬಸವೇಶ್ವರ ದೇವಸ್ಥಾನದ ಲೋಕಾಪರ್ಣೆ ಹಾಗೂ ನಂದಿ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವಸ್ಥಾನಗಳನ್ನು ಸ್ವಚ್ಛ ಹಾಗೂ ಸುಂದರವಾಗಿಡಬೇಕು. ದೇವಸ್ಥಾನಗಳಲ್ಲಿ ಶರಣರ ಅನುಭವ ಗೋಷ್ಠಿಗಳು ನಡೆಯಬೇಕು. ಇದರಿಂದ ಭಕ್ತರಿಗೆ ಮನಸ್ಸಿನ ಶಾಂತಿ, ನೆಮ್ಮದಿ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಸಹಕಾರಿಯಾಗುತ್ತದೆ ಎಂದರು.  

ಹಂದಿಗುಂದ ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ, ಚಿಮ್ಮಡ ಪ್ರಭು ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.  

ಕಾರ್ಯಕ್ರಮದಲ್ಲಿ ಗುರುಮಠದ ಗುರುಲಿಂಗಯ್ಯ ಸ್ವಾಮೀಜಿ, ಕ್ಯಾಸಪ್ಪನಹಟ್ಟಿ ನಿಂಗಪ್ಪ ಮಹಾರಾಜರು, ರೈತ ಮುಖಂಡ ಬನಪ್ಪ ತೇಲಿ, ಸತೀಶ ಬದ್ರಶೆಟ್ಟಿ ಸೇರಿದಂತೆ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಬಸವರಾಜ ಬದ್ರಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ದಾಸೋಹದ ಮಹಾಮನೆಯಲ್ಲಿ ಅನ್ನಸಂತರೆ​‍್ಣ ನಡೆಯಿತು. 


ಸುದ್ದಿ ಓದಿ