ಸೌಂದತ್ತಿ

ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಾಪನೆಗೆ ಆದೇಶ

ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸ್ಥಾಪನೆಗೆ ಆದೇಶ

ಸವದತ್ತಿ 10: ನೂತನ ತಾಲೂಕಾಗಿ ರಚನೆಗೊಂಡ ಯರಗಟ್ಟಿ ತಾಲೂಕಿಗೆ ಹಂತ ಹಂತವಾಗಿ ಎಲ್ಲ ಇಲಾಖೆಯ ಕಚೇರಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಸವದತ್ತಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿದ್ದ ಯರಗಟ್ಟಿ ಉಪ ಮಾರುಕಟ್ಟೆಯನ್ನು ಪ್ರತ್ಯೇಕಿಸಿ ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನಾಗಿ ಬೇರಿ​‍್ಡಸಿ ಸರಕಾರದಿಂದ ಆದೇಶಿಸಲಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದ್ದಾರೆ. 

ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಸ್ಥಾಪಿಸಲು ಸದರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಸೂಚಿತ 93 ವಿವಿಧ ಕೃಷಿ ಉತ್ಪನ್ನಗಳನ್ನು ಮಾರಾಟ ನಿಯಂತ್ರಣಕ್ಕೆ ಒಳಪಡಿಸಲು ಉದ್ದೇಶಿಸಿರುವ ಪ್ರಸ್ತಾವಣೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜು.2 ಮತ್ತು ಜು. 6ರಂದು ಪತ್ರಿಕೆಗಳಲ್ಲಿ ಪ್ರಕಟಿಸಿ ಆಕ್ಷೇಪಣೆ ಮತ್ತು ಸಲಹೆಗಳ ಕುರಿತು 30 ದಿವಸದೊಳಗೆ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಯಾವುದೆ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗಿಲ್ಲದಿರುವದರಿಂದ ಸೆ.7ರಂದು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) 1966 ಕಲಂ 145ರನ್ವಯ ಸವದತ್ತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಕ್ಷೇತ್ರದಿಂದ ಯರಗಟ್ಟಿಯನ್ನು ಬೇರ​‍್ಪಡಿಸಿ ಪ್ರತ್ಯೇಕವಾಗಿ ಯರಗಟ್ಟಿ ತಾಲೂಕನ್ನು ಒಳಗೊಂಡಂತೆ ಯರಗಟ್ಟಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಸ್ಥಾಪಿಸಿ ರಾಜ್ಯಪಾಲರ ಆದೇಶಾನುಸಾರ ಸಹಕಾರ ಇಲಾಖೆಯ ಸರಕಾರದ ಆನ ಕಾರ್ಯದರ್ಶಿಯವರಿಂದ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ