ಚಿಕ್ಕೋಡಿ

ವಿರೋಧ ಪಕ್ಷದ ನಾಯಕರು ನಾಟಕ ಮಾಡುವುದು ನಿಲ್ಲಿಸಲಿ: ಸಂಸದ ಜೊಲ್ಲೆ

ವಿರೋಧ ಪಕ್ಷದ ನಾಯಕರು ನಾಟಕ ಮಾಡುವುದು ನಿಲ್ಲಿಸಲಿ: ಸಂಸದ ಜೊಲ್ಲೆ
ಚಿಕ್ಕೋಡಿ: ಕೋವಿಡ್ ಉಪಚಾರ ಕೇಂದ್ರ ಉದ್ಘಾಟಿಸಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು.

ಚಿಕ್ಕೋಡಿ 25 : ಕೆಲವರು ಕೋವಿಡ್ ಕೇರ ಆಸ್ಪತ್ರೆ ತೆಗೆದು  ನಾಟಕ ಮಾಡುತ್ತಿದ್ದಾರೆ. ಅಲ್ಲಿ ಸೇವೆಯು ಇಲ್ಲ ವೈದ್ಯರು ಇಲ್ಲ. ಆದರೆ ಪ್ರತಿಷ್ಠೆಗೆ ರಾಜಕೀಯ ಮಾಡುವುದು ಸರಿಯಾದ ಕ್ರಮವಲ್ಲ  ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರೋಧ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು. 

ಚಿಕ್ಕೋಡಿ ನಗರದ ಹೊರವಲಯದಲ್ಲಿ ತಾಲೂಕಾ ಆರೋಗ್ಯ ಕೇಂದ್ರ ಹಾಗೂ ಜೊಲ್ಲೆ ಚ್ಯಾರಿಟಿ ಪೌಂಡೇಶನ ಸಹಯೋಗದಲ್ಲಿ  ಕೋವಿಡ್ ಉಪಚಾರ ಕೇಂದ್ರ ಉದ್ಘಾಟಿಸಿ ಮಾತನಾಡಿದರು. 

ಜೊಲ್ಲೆ ಚಾರಿಟಿ ಪೌಂಡೇಶನ ಮೊದಲಿನಿಂದಲೂ ಜನಸೇವೆ ಮಾಡುತ್ತಾ ಬಂದಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿ ಕೂಡಿ ಕೆಲಸ ಮಾಡಿದರೇ ರೋಗ ನಿಯಂತ್ರಣ ಬರಲು ಸಾಧ್ಯ ಎಂದರು. 

ಜೊಲ್ಲೆ ಚ್ಯಾರಿಟಿ ಪೌಂಡೇಶನ 200 ಆಕ್ಸಿಜನ್ ಸಾಂದ್ರಕ ಖರೀದಿ ಮಾಡಿದ್ದು. ಪ್ರತಿ ಕೋವಿಡ್ ಆಸ್ಪತ್ರೆಗೆ 10 ರಂತೆ ಆಕ್ಸಿಜನ್ ಸಾಂದ್ರಕ ಕೊಡಲಾಗುತ್ತದೆ ಎಂದರು. 

ದುರೀಣ ಜಗದೀಶ ಕವಟಗಿಮಠ ಮಾತನಾಡಿ. ಜನರ ನಿರ್ಲಕ್ಷ ವಹಿಸಿದ್ದು ಇದರಿಂದ ಸಾವು ಸೋಂಕು ತಗುಲುತ್ತಿದೆ. ಸರಕಾರ ಸಂಘ ಸಂಸ್ಥೆ ಎಷ್ಟೇ ಪ್ರಯತ್ನ ಮಾಡಿದರೂ ಜನರು ಜಾಗೃತಿ ಆಗುವವರಿಗೂ ನಿಯಂತ್ರಣ ಬರಲು ಸಾಧ್ಯವಾಗುದಿಲ್ಲ. ಜನರು ಮುಕ್ತವಾಗಿ ಹೇಳಿಕೊಳ್ಳಬೇಕು. ಕೈ ಮೀರಿ ಹೋದಾಗ ರೋಗ ಜಾಸ್ತಿ ಆಗುತ್ತಿದೆ. ಜನರು ಎಚ್ಚರ ವಹಿಸಿ ರೋಗ ಹರಡದಂತೆ ನೊಡಿಕೊಳ್ಳಬೇಕು. ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಉಪವಿಭಾಗಾಧಿಕಾರಿ ಯುಕೇಶಕುಮಾರ. ಡಿವೈಎಸ್ ಪಿ ಮನೋಜ ನಾಯಿಕ ಮಾತನಾಡಿದರು.  

ತಹಶೀಲ್ದಾರ ಪ್ರವೀಣ ಜೈನ್‌. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಉಪಾಧ್ಯಕ್ಷ ಸಂಜು ಕಾಂಬಳೆ. ಐಎಂಎ ಅಧ್ಯಕ್ಷ ಡಾ.ರೋಹಿಣಿ ಕುಲಕರ್ಣಿ,ಶಾಂಭವಿ ಅಶ್ವಥಪುರ, ವಿಶ್ವನಾಥ ಕಾಮಗೌಡ. ಸಂತೋಶ ಟವಳೆ, ಸಂತೋಷ ಜೋಗಳೆ, ಬಾಬು ಮಿರ್ಜಿ, ಮನೋಜ ನಾಯಿಕ,ಸಿದ್ದಪ್ಪ ಡಂಗೇರ, ಟಿಎಚ್ ಒ ಕರಗಾಂವೆ,ಶಕುಂತಲಾ ಡೋಣವಾಡೆ, 

ಡಾ.ಸಲಗರೆ, ಬಸವಪ್ರಸಾದ ಜೊಲ್ಲೆ, ಸಂಜು ಅರಗೆ ಮುಂತಾದವರು ಇದ್ದರು. ಬಿಇಒ ಬಿ.ಎ.ಮೇಕನಮರಡಿ ಸ್ವಾಗತಿಸಿದರು. 

ಸುದ್ದಿ ಓದಿ