ಶಿಗ್ಗಾವ್

ರಾಜ್ಯ ಸರ್ಕಾರದಿಂದ ವಿಶೇಷ ಸಬ್ಸಿಡಿಗೆ ಅವಕಾಶ: ಸಚಿವ ಬಸವರಾಜ

ರಾಜ್ಯ ಸರ್ಕಾರದಿಂದ ವಿಶೇಷ ಸಬ್ಸಿಡಿಗೆ ಅವಕಾಶ: ಸಚಿವ ಬಸವರಾಜ

ಶಿಗ್ಗಾವಿ ನವೆಂಬರ್ 04: 2020-21ರ ಬಜೆಟ್‍ನಲ್ಲಿ ಆದೇಶವಾದ ಶಿಗ್ಗಾವಿ ಟೆಕ್ಸಟೈಲ್ ಪಾರ್ಕ್‍ನಲ್ಲಿ ನೂಲಿನಿಂದ ಹಿಡಿದು ಎಲ್ಲ ರೀತಿಯ ಟೆಕ್À್ಸಟೈಲ್‍ಗಳಿಗೆ ಅವಕಾಶವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿಶೇಷ ಸಬ್ಸಿಡಿಗೆ ಅವಕಾಶವಿದೆ. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳವಾರ ಸವಣೂರ ರಸ್ತೆಯಲ್ಲಿ ತಮ್ಮ ನಿವಾಸದಲ್ಲಿ ವರದಿಗಾರರೊಂದಿಗೆ ಮಾತನಾಡಿದರು. 

ಟೆಕ್ಸಟೈಲ್ ಪಾರ್ಕಿಗೆ ಬೇಕಾಗಿರುವ ಜಮೀನಿನ ಬಗ್ಗೆ ಡಿಸಿಯವರಿಂದ ಸರ್ಕಾರಕ್ಕೆ ಪ್ರಸ್ತಾವನೆ ಹೋಗಬೇಕಿದೆ ಈ ವಾರದಲ್ಲಿ ಹೋಗುತ್ತದೆ, ಬೇಕಾಗುರುವ  ಉದ್ಯಮ ಡಿಮಾಂಡ ಸರ್ವೇಗಾಗಿ ಅರ್ಜಿಗಳನ್ನು ಮುಂದೆ ಕರೆಯಲಾಗುವುದು. ಆಸಕ್ತಿ ಇರುವ ಕಂಪನಿಯವರು ಅರ್ಜಿಗಳನ್ನು ಹಾಕಬಹುದಾಗಿದೆ. ಇದರ ಅನುಗುಣವಾಗಿ ಮೂಲ ಸೌಲಭ್ಯಗಳನ್ನು ಒದಗಿಸಲು ನಿರ್ಧಾರವಾಗುತ್ತದೆ.

ಸಂತ ಶಿಶುವಿನಾಳರ ಶರೀಫರ ಗದ್ದುಗೆ ಅಭಿವೃದ್ಧಿಗಾಗಿ 5 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದ್ದು ಡಿಸೆಂಬರ್ïಲ್ಲಿ ಡಿಪಿಆರ್‍ಗೆ ಅನುಮೋದನೆ ಸಿಗುವ ಸಾಧ್ಯತೆಗಳಿವೆ. ಅದರ ಸಮಗ್ರ ಅಭಿವೃದ್ದಿಯ ಕೆಲಸವನ್ನು ಮಾಡಲಾಗುವದು, ಹೊಸದಾಗಿ ಪ್ರಾಧಿಕಾರ ಮಾಡುತ್ತಿಲ್ಲ ಬಾಡ ಪ್ರಾಧಿಕಾರದ ಜೊತೆಗ ಸೇರಿಸಲು ಚಿಂತನೆ ನಡೆಸಲಾಗಿದೆ ಕ್ಷೇತ್ರ ಒಂದೇ ಆಗಿರುವದದಿಂದ ಅಭಿವೃದ್ದಿಗೆ ಆಡಳಿತಾತ್ಮಕ ಕಾರ್ಯಗಳಿಗೆ ಅನೂಕುಲವಾಗುತ್ತದೆ.

ಸಣ್ಣ ನೀರಾವರಿ ಯೋಜನೆಯಲ್ಲಿ ಸಣ್ಣ ಕೆರೆಗಳ ಅಭಿವೃದ್ದಿಗೆ 30 ಕೋಟಿ ರೂಗಳು ಬಿಡುಗಡೆಯಾಗಿದ್ದು ಟೆಂಡರ ಪ್ರಕ್ರೀಯೆ ಪ್ರಾರಂಭವಾಗಿದೆ, ಶಿಗ್ಗಾವಿ ಹಳೇ ಬಸ್ ನಿಲ್ದಾಣ ನವೀಕರಣಕ್ಕೆ  ನಿರ್ಮಾಣಕ್ಕೆ 3 ಕೋಟಿ ರೂಗಳು ಬಿಡುಗಡೆಯಾಗಿದ್ದು ಟೆಂಡರ ಪ್ರಕ್ರೀಯೆಯನ್ನು ಮಾಡಬೇಕಿದೆ, ಏತ ನೀರಾವರಿ ಯೋಜನೆಗೆ ವಿದ್ಯುತ್ ಸಂಪರ್ಕ ಮಾಡುವ ಕಾರ್ಯ ನಡೆದಿದೆ 2 ತಿಂಗಳಲ್ಲಿ ಎಲ್ಲ ಕಾರ್ಯ ಮುಗಿಯುತ್ತದೆ, ಚನ್ನಮ್ಮ ಪುಸ್ಥಳಿಯನ್ನು ಸ್ಥಾಪಿಸುವ ಕಾರ್ಯಕ್ಕೆ ತಡೆ ಬಂದಿದ್ದು ಅದು ಕೋರ್ಟಿನಲ್ಲಿರುವ ಕಾರಣ ವ್ಯಾಜ್ಯದ ತಿರ್ಮಾನ ನೋಡಿ ಮುಂದಿನ ಕ್ರಮಕ್ಕೆ ಯೋಚಿಸಬೇಕಿದೆ ಎಲ್ಲಿ ಚನ್ನಮ್ಮ ಮೂರ್ತಿ ಸ್ಥಾಪನೆಯಾಗುತ್ತದೆಯೋ ಅಲ್ಲಿಯೇ ರಾಯಣ್ಣನ ಮೂರ್ತಿ ಸಹ ಸ್ಥಾಪನೆಯಾಗಬೇಕು ಮುಂದಿನ ದಿನಗಳಲ್ಲಿ ಆ ಕಾರ್ಯವನ್ನು ಮಾಡಲಾಗುವುದು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ ಅವರ ಮೂರ್ತಿಯೂ ಸಿದ್ದವಾಗಿದ್ದು ಅದನ್ನು ಆದಷ್ಟು ಬೇಗನೆ ಸ್ಥಾಪಿಸಲಾಗುವದು ಎಂದರು.

ಸವಣೂರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಶೈಲಾ ಮುದಿಗೌಡ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಕೈತಪ್ಪಿದೆ, ಬಿಜೆಪಿಯ ರಾಜ್ಯಾಧ್ಯಕ್ಷರ ಸೂಚನೆಯ ಮೆರೆಗೆ ಪಕ್ಷದ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಹುಮತವಿರಲಿಲ್ಲ ಕಾರಣ ಕಾಂಗ್ರೇಸ್‍ನಲ್ಲಿ ಎರಡು ಗುಂಪುಗಳಾಗಿ ಅದರ ಪರಿಣಾಮ ನಮ್ಮರಲ್ಲಿ ಎರಡು ಗುಂಪುಗಳಾಗಿದ್ದವು ಮತ್ತು ನಮ್ಮ ಪಕ್ಷದ ನಾಲ್ಕು ಜನ ಭಾಗವಹಿಸದ ಕಾರಣ ಉಪಾಧ್ಯಕ್ಷ ಸ್ಥಾನ ಕೈತಪ್ಪಿದೆ ರಾಜ್ಯಾದ್ಯಕ್ಷರ ಸೂಚನೆಯನ್ನು ಉಲ್ಲಂಘಿಸಿ ಭಾಗವಹಿಸದವರ ಬಗ್ಗೆ ಸಂಪೂರ್ಣ  ವರದಿಯನ್ನು ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ವರಿಗೆ ನೀಡಲಾಗುವದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾಜಪ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಇದ್ದರು.

ಸುದ್ದಿ ಓದಿ