ಅಥಣಿ

ನ್ಯೂ ಗಣೇಶ್ ಫರ್ನಿಚರ, ಹೊಮ್ ಅಪ್ಲಾಯನ್ಸಸ್‌ನ ಮಳಿಗೆ ಆರಂಭ

ನ್ಯೂ ಗಣೇಶ್ ಫರ್ನಿಚರ, ಹೊಮ್ ಅಪ್ಲಾಯನ್ಸಸ್‌ನ ಮಳಿಗೆ ಆರಂಭ

ಅಥಣಿ 05: ಬೃಹತ್ ಪ್ರಮಾಣದ ಗಣೇಶ ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಅಥಣಿ ಜನತೆಗೆ ಕರೆ ನೀಡಿದರು. 

ಅವರು ನ್ಯೂ ಗಣೇಶ್ ಫರ್ನಿಚರ ಮತ್ತು ಹೊಮ್ ಅಪ್ಲಾಯನ್ಸಸ್ ನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾನ್ಯವಾಗಿ ಅಥಣಿ ಜನತೆ ಪೀಠೋಪಕರಣ ಖರೀದಿಗೆ ಮಹಾರಾಷ್ಟ್ರದ ಸಾಂಗಲಿ ಅಥವಾ ಕೊಲ್ಹಾಪುರಕ್ಕೆ ಹೋಗಬೇಕಿತ್ತು. ಈಗ ಅಥಣಿಯಲ್ಲಿಯೇ ಅದೇ ಮಾದರಿಯಲ್ಲಿ ಮಳಿಗೆ ಪ್ರಾರಂಭಗೊಂಡಿದ್ದರಿಂದ ಬೇರೆ ಸ್ಥಳಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದರು.     ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಕೆ.ಎಲ್ ಕುಂದರಗಿ, ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ಮಳಿಗೆ ಪ್ರಾರಂಭಗೊಂಡಿರುವುದು ಅಥಣಿ ಜನತೆಯ ಸಂತಸ ಹೆಚ್ಚಿಸಿದೆ ಎಂದರು.     

ಸಾಂಗಲಿ ಮಹಾನಗರ ಪಾಲಿಕೆ ಸದಸ್ಯ ವಿಷ್ಣು ಮಾನೆ ಮಾತನಾಡಿ, ಈಗಾಗಲೇ ನಮ್ಮ ಮಾಲಿಕತ್ವದಲ್ಲಿಯೇ ಮಹಾರಾಷ್ಟ್ರದ ಸಾಂಗಲಿಯಲ್ಲಿ ಪೀಠೋಪಕರಣ ಮಳಿಗೆ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ಅಥಣಿಯಲ್ಲಿಯೂ ಸಹ ಪ್ರಾರಂಭಿಸುವ ಉದ್ದೇಶ ನಮ್ಮದಾಗಿತ್ತು ಎಂದ ಅವರು ಸ್ಪರ್ಧಾತ್ಮಕ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಪಿಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತೇವೆ ಎಂದರು.  

ಮುಖ್ಯ ಅತಿಥಿಗಳಾಗಿ ಮುಖಂಡರಾದ ಗಜಾನನ ಮಂಗಸೂಳಿ, ಅರುಣ ಭಾಸಿಂಗಿ, ವಿನಾಯಕ ದೇಸಾಯಿ, ಸಿದ್ಧಾರ್ಥ ಸಿಂಗೆ,  ಮಯೂರ ಸಿಂಗೆ, ಸಿದ್ದು ಪಾಟೀಲ, ಗುಂಡು ಇಜಾರೆ, ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ದತ್ತಾ ವಾಸ್ಟರ್, ದಿಲಿಪ ಲೋಣಾರೆ,  ವೀಲೀನ್ ಯಳಮೇಲಿ, ಸೈಯ್ಯದಮೀನ್ ಗದ್ಯಾಳ, ಆಸೀಫ್ ತಾಂಬೋಳಿ, ರಿಯಾಜ ಸನದಿ ಆಗಮಿಸಿದ್ದರು. 

ವಿಲಾಸ ಮಾನೆ, ಬಾಳಾಸಾಹೇಬ ಮಾನೆ, ರಾವಸಾಹೇಬ ಮಸಾಳ, ಅರುಣ ಮಸಾಳ, ರಾಜಾರಾಮ ಪಾಟೀಲ, ಗಣೇಶ ಮಸಾಳ, ವಿನಾಯಕ ಪಾಟೀಲ, ತಾನಾಜಿ ಭೋಸಲೆ, ಸಂಜು ಮಾನೆ, ನಾನಾ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ